






ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಆ 25 ದಂದು ಮನೆ ಮನೆ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮವು, ಬೊಳುವಾರಿನಲ್ಲಿರುವ, ಪ್ರೇಮಲತಾ ರಾವ್ ಮತ್ತು ಶ್ರೀಯುತ ರಂಗನಾಥ ರಾವ್ ದಂಪತಿ ಸ್ವಗೃಹ ‘ನವನೀತಂ’ನಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ, ನಿತ್ಯಾತ್ಮ ಶುಕಯೋಗಿ ವಿರಚಿತ ಕನ್ನಡ ಭಾಗವತದಿಂದ ಆಯ್ದ ‘ಗೋವರ್ಧನೋದ್ಧರಣ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು.ಗಮಕಿ ಜಯಶ್ರೀ ಆರ್. ಭಟ್ ವಾಚಿಸಿ, ಈಶ್ವರ ಭಟ್, ಗುಂಡ್ಯಡ್ಕ ವ್ಯಾಖ್ಯಾನಿಸಿದರು.




ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಪ್ರೊ. ವತ್ಸಲಾ ರಾಜ್ಞಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ, ಕಲಾವಿದರಿಗೆ ಶಾಲು ಹೊದಿಸಿ, ಹೊತ್ತಗೆನ್ನಿತ್ತು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕುಟುಂಬದ ಸದಸ್ಯರು, ಬಂಧುಗಳು, ಕಲಾಸಕ್ತ ಊರ ಮಹನೀಯರು ಉಪಸ್ಥಿತರಿದ್ದರು. ಅಚ್ಚುಕಟ್ಟಾಗಿ ನಡೆದ ಗಮಕ ಕಾರ್ಯಕ್ರಮವು ಕಲಾಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.










