







ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಇದರ ಪುತ್ತೂರು ತಾಲೂಕು ಘಟಕದ ವತಿಯಿಂದ ಆ.25ರಂದು ಮನೆ ಮನೆ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮವು, ಬೊಳುವಾರಿನಲ್ಲಿರುವ ಪ್ರೇಮಲತಾ ರಾವ್ ಮತ್ತು ರಂಗನಾಥ ರಾವ್ ದಂಪತಿಯ ’ನವನೀತಂ’ನಲ್ಲಿ ನಿವಾಸದಲ್ಲಿ ನಡೆಯಿತು.


ನಿತ್ಯಾತ್ಮ ಶುಕಯೋಗಿ ವಿರಚಿತ ಕನ್ನಡ ಭಾಗವತದಿಂದ ಆಯ್ದ ’ಗೋವರ್ಧನೋದ್ಧರಣ’ ಎಂಬ ಕಥಾಭಾಗವನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು. ಗಮಕಿ ಜಯಶ್ರೀ ಆರ್. ಭಟ್ ವಾಚಿಸಿ, ಈಶ್ವರ ಭಟ್, ಗುಂಡ್ಯಡ್ಕ ವ್ಯಾಖ್ಯಾನಿಸಿದರು. ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ರಾಮಕುಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಪ್ರೊ. ವತ್ಸಲಾ ರಾಜ್ಞಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಲಾವಿದರನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.













