






1500ಕ್ಕೂ ಅಧಿಕ ಮಂದಿ ರಾಧೆ-ಕೃಷ್ಣ ವೇಷದಾರಿ ಪುಟಾಣಿಗಳ ನಿರೀಕ್ಷೆ–


ಪೇಟೆಯಲ್ಲಿ ರಾಧೆ-ಕೃಷ್ಣ-ಯಶೋಧೆಯರ ಭವ್ಯ ಶೋಭಾಯಾತ್ರೆ



ಬಾಲಕೃಷ್ಣನ ತೊಟ್ಟಿಲ ಸಂಭ್ರಮ
ಪುತ್ತೂರು: ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ 28ನೇ ವರ್ಷದ `ಶ್ರೀಕೃಷ್ಣ ಲೋಕ’ ಕಾರ್ಯಕ್ರಮವು ಸೆ.4ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ನಡೆಯಲಿದೆ ಎಂದು ಕೃಷ್ಣಲೋಕ ಸಮಿತಿ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ವಿವೇಕಾನಂದ ಶಿಶು ಮಂದಿರದಲ್ಲಿ ಕಳೆದ 27 ವರ್ಷಗಳಿಂದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿ ರಾಧೆ, ಕೃಷ್ಣ, ಯಶೋಧೆ ವೇಷಧಾರಿ ಮಕ್ಕಳೊಂದಿಗೆ ವಿಶೇಷ ಶೋಭಾಯಾತ್ರೆಯ ಮೂಲಕ ಅದ್ದೂರಿಯಾಗಿ ನಡೆಯುತ್ತಾ ಬಂದಿರುತ್ತದೆ. ಈ ವರ್ಷವೂ ಅದ್ದೂರಿಯಾಗಿ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಂಭ್ರಮಿಸಲಿದೆ ಎಂದರು.
ಶಿಕ್ಷಣವನ್ನು ತಲುಪಿಸಿದ ಸಂತೃಪ್ತಿಯಿದೆ:
ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ರಾಜಗೋಪಾಲ್ ಭಟ್ ಅವರು ಮಾತನಾಡಿ ವಿವೇಕಾನಂದ ಶಿಶು ಮಂದಿರ 38 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ವೈಜ್ಞಾನಿಕ ಶಿಕ್ಷಣವನ್ನು ಕೊಡುತ್ತಾ, ಸಾವಿರಾರು ಮಕ್ಕಳನ್ನು ಈ ದೆಸೆಯಲ್ಲಿ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಸಾವಿರಾರು ಮಕ್ಕಳ ಮೂಲಕ ಸಾವಿರಾರು ಮನೆಗಳಿಗೂ ಕೂಡ, ವಿವೇಕಾನಂದ ಶಿಶುಮಂದಿರದ ಶಿಕ್ಷಣವನ್ನು ತಲುಪಿಸಿದ ಒಂದು ಸಂತೃಪ್ತಿ ನಮ್ಮೆಲ್ಲ ಕಾರ್ಯಕರ್ತ ಬಂಧುಗಳಿಗೆ ಇದೆ ಎಂದರು.
ಬಾಲಕೃಷ್ಣನ ತೊಟ್ಟಿಲ ಸಂಭ್ರಮ:
ಬೆಳಿಗ್ಗೆ ಗಂಟೆ 9ಕ್ಕೆ ಶಿಶು ಮಂದಿರದ ಆವರಣದಲ್ಲಿ ಕೃಷ್ಣ, ರಾಧೆ, ಯಶೋಧೆಯರ ನೋಂದಾವಣೆಯು ಪ್ರಾರಂಭಗೊಳ್ಳಲಿದೆ. ನಂತರ ಮಕ್ಕಳಿಂದ ಪ್ರಾರ್ಥನೆ, ಭಜನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ತೊಟ್ಟಿಲ ಸಂಭ್ರಮದಲ್ಲಿ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಲಾಗುವುದು. ನಂತರ ಮಗುವನ್ನು ತೊಟ್ಟಿಲಲ್ಲಿ ತೂಗುವ ಸಂಭ್ರಮವು ನಡೆಯಲಿದೆ. ಮಾತೆಯರು ಬಾಲಕೃಷ್ಣನಿಗೆ ಬೆಣ್ಣೆ ತಿನ್ನಿಸಿ, ಜೋಗುಳ ಹಾಡಲಿದ್ದಾರೆ. ಬಳಿಕ ಶೋಭಾಯಾತ್ರೆ ನಡೆಯಲಿದೆ ಎಂದು ಹರ್ಷ ಕುಮಾರ್ ರೈ ಮಾಡಾವು ಹೇಳಿದರು.
ಸಭಾ ಕಾರ್ಯಕ್ರಮ:
ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಆಡಳಿತ ನಿರ್ದೇಶಕ ಚೇತನ್ಪ್ರಕಾಶ್ ಕಜೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪೂರ್ಣಾತ್ಮರಾಮ ಈಶ್ವರಮಂಗಲ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹರ್ಷಕುಮಾರ್ ರೈ ಮಾಡಾವು ಅವರು ತಿಳಿಸಿದರು.
ರಾಧೆ-ಕೃಷ್ಣಯರ ಭವ್ಯ ಶೋಭಾಯಾತ್ರೆ:
ಪ್ರತಿ ವರ್ಷದಂತೆ ಶಿಶು ಮಂದಿರದ ಆವರಣದಿಂದ ರಾಧೆ-ಕೃಷ್ಣ ಭವ್ಯ ಶೋಭಾಯಾತ್ರೆಯು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯ ದಾರಿಯನ್ನು ಈ ಭಾರಿ ಬದಲಾವಣೆ ಮಾಡಿದ್ದು, ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶು ಮಂದಿರದ ಬಳಿಯಿಂದ ಹೊರಟ ಶೋಭಾಯಾತ್ರೆಯು ಚೇತನಾ ಆಸ್ಪತ್ರೆ ರಸ್ತೆಯ ಮೂಲಕ ಸಾಗಿ ಕೋರ್ಟ್ರಸ್ತೆಯಾಗಿ ಮುಖ್ಯರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಳ್ಳಲಿದೆ. ರಾಧೆ-ಕೃಷ್ಣರ ವೇಷಧಾರಿ 1,500 ಪುಟಾಣಿಗಳು ಶೋಭಾಯಾತ್ರೆಯಲ್ಲಿ ಮೆರುಗು ತರಲಿದೆ ಎಂದು ಸಮಿತ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ರೈ ಸಣಂಗಳ ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಯಸ್, ಶ್ರೀಕೃಷ್ಣಲೋಕ ಸಮಿತಿ ಜೊತೆಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.
ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಶಿಶುಮಂದಿರ
ವಿವೇಕಾನಂದ ಶಿಶುಮಂದಿರ ಕಳೆದ 38 ವರ್ಷಗಳಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ವರ್ಷಪೂರ್ತಿ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳಾದ ಸ್ವಾತಂತ್ರ÷್ಯ ದಿನಾಚರಣೆ, ಗಣಪತಿ ಹೋಮ, ಬೆಳದಿಂಗಳ ಊಟ, ರಕ್ಷಾಬಂಧನ, ಶ್ರೀಕೃಷ್ಣ ಲೋಕ ಹಾಗೂ ವಾರ್ಷಿಕೋತ್ಸವಗಳನ್ನು ಆಯೋಜಿಸಲಾಗುತ್ತಿದೆ. ಕಳೆದ 28 ವರ್ಷಗಳಿಂದ `ಶ್ರೀಕೃಷ್ಣ ಲೋಕ' ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಸಾವಿರಾರು ಮಕ್ಕಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಶಿಶುಮಂದಿರದ ಸೇವಾ ಚಟುವಟಿಕೆಗಳಿಗೆ ಪುತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಮತ್ತು ಬೆಂಬಲ ದೊರೆಯುತ್ತಿದ್ದು, ಸಮಾಜದಲ್ಲಿ ಶಿಶುಮಂದಿರವು ಉತ್ತಮ ಹೆಸರುಗಳಿಸಿದೆ
ರಾಜಗೋಪಾಲ್ ಭಟ್
ಅಧ್ಯಕ್ಷರು, ವಿವೇಕಾನಂದ ಶಿಶುಮಂದಿರ, ಪುತ್ತೂರು










