






ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪುತ್ತೂರು ಶಾಖೆಯ 2025-26ನೇ ಸಾಲಿನ ಮಹಾಸಭೆಯು ಹಾಗೂ ಅಭಿನಂದನಾ ಕಾರ್ಯಕ್ರಮಗಳು ಆ.29ರಂದು ಸರಕಾರಿ ನೌಕರರ ಸಂಘದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆಯಿತು.
ಸರಕಾರಿ ನೌಕರರಿಗೆ ಜನರ ಹಿತ ಮತ್ತು ಕಲ್ಯಾಣ ಮುಖ್ಯ-ವಿಶ್ವನಾಥ ಅಜಿಲ:


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ವಿಶ್ವನಾಥ ಅಜಿಲ ಮಾತನಾಡಿ, ಸರಕಾರಿ ನೌಕರಿ ಎನ್ನುವುದು ಐತಿಹಾಸಿಕ ಹುದ್ದೆ. ಸರಕಾರಿ ನೌಕರರ ಆಡಳಿತ, ವರ್ಗಾವಣೆ ಬಗ್ಗೆ ಚಾಣಾಕ್ಷನ ಅರ್ಥ ಶಾಸ್ತ್ರದಲ್ಲಿ ಉಲ್ಲೇಖವಿದೆ. ಸರಕಾರಿ ನೌಕರರಿಗೆ ಜನರ ಹಿತ ಮತ್ತು ಕಲ್ಯಾಣ ಮುಖ್ಯ. ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡಿ ಕಟ್ಟ ಕಡೆಯ ಜನರಿಗೆ ತಲುಪಿಸುವ ಹೊಣೆ ಸರಕಾರಿ ನೌಕರರ ಮೇಲಿದೆ. ಹೀಗಾಗಿ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವಾದರೂ ನಮಗೂ ಸರಕಾರಕ್ಕೂ ಅಪವಾದ ಬರಲಿದೆ. ಸರಕಾರಿ ನೌಕರರು ಕಾನೂನಿನ ಅರಿವು ಇರುವವರಾಗಿದ್ದು ನಮ್ಮ ಕರ್ತವ್ಯವನ್ನು ಜವಾಬ್ದಾರಿ ಹಾಗೂ ಕಾನೂನು ಬದ್ಧವಾಗಿ ನಿರ್ವಹಿಸಬೇಕು. ಜನರೊಂದಿಗೆ ಸಮನ್ವಯತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕಾದ ಮಹತ್ತರ ಜವಾಬ್ದಾರಿಯಿದೆ ಎಂದು ಹೇಳಿದರು.
ವೃತ್ತಿಯನ್ನು ಪ್ರೀತಿ, ಗೌರವದಿಂದ ನಿರ್ವಹಿಸಿದಾಗ ಯಾವುದೂ ಒತ್ತಡವಲ್ಲ-ಡಿ.ಸುರೇಶ್:



ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಮಾತನಾಡಿ, ಸಾರ್ವಜನಿಕರ ಸೇವೆ ಮಾಡುವಂತ ವಿಶೇಷ ಅವಕಾಶ ಸರಕಾರಿ ನೌಕರರಿಗೆ ದೊರೆತಿದೆ. ಕೆಲಸವನ್ನು ನಾವು ಪ್ರೀತಿಸಿ, ಗೌರವದಿಂದ ನಿರ್ವಹಿಸಬೇಕು. ಆಗ ಯಾವುದೂ ಒತ್ತಡ ಆಗುವುದಿಲ್ಲ. ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ಗೊಳಿಸುವ ಜವಾಬ್ದಾರಿ ನಮ್ಮದು. ಅದನ್ನು ನಾವು ಮಾಡಲೇಬೇಕಾದ ಹೊಣೆ ನಮ್ಮದು. ನಾವು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ನೌಕರರ ಧ್ವನಿಯಾಗಿ ಸಂಘಟನೆಯ ಕಾರ್ಯ: ನವೀನ್ ಕುಮಾರ್ ಎಂ.ಎಸ್:
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್ ಮಾತನಾಡಿ, ಸರಕಾರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರಕಾರಿ ನೌಕರರ ಪಾತ್ರ ಬಹುಮುಖ್ಯವಾದುದು. ಈ ಸಮಯದಲ್ಲಿ ನೌಕರರು ಬಹಳಷ್ಟು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇಂತಹ ಸಮಯದಲ್ಲಿ ಸಂಘಟನೆಯು ಸರಕಾರಿ ನೌಕರರ ಹಿತ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಹಂತದಲ್ಲೂ ನೌಕರರ ಧ್ವನಿಯಾಗಿ ಸಂಘಟನೆ ಕೆಲಸ ಮಾಡುತ್ತಿದೆ. ನೌಕರರ ಸಮಸ್ಯೆ ಆಲಿಸಲು ಹಾಗೂ ಸಂಘವು ಇನ್ನಷ್ಟು ಬಲೀಷ್ಠವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಮಹಾಸಭೆ ನಡೆಸಲಾಗುತ್ತಿದೆ ಎಂದು ಹೇಳಿದ ಅವರು ಕೆಸಿಎಸ್ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿರುವ ಸಮಸ್ಯೆಯನ್ನು ರಾಜ್ಯ ಸಂಘದ ಮೂಲಕ ಪರಿಹರಿಸಲಾಗುತ್ತಿದ್ದು ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೇಳಿದರು.
ಸದಸ್ಯರು ಸಂಘದ ಬೆಳವಣಿಗೆಯಲ್ಲಿ ಸಹಕರಿಸಬೇಕು-ಶಿವಾನಂದ ಆಚಾರ್ಯ:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಶಿವಾನಂದ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲಸ ಕಾರ್ಯಗಳ ಒತ್ತಡವಿದೆ. ಆದರೂ ಸಂಘದ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿ, ಸಂಘದ ಬೆಳವಣಿಗೆಯಲ್ಲಿ ಸಹಕರಿಸಬೇಕು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಪದ್ಮನಾಭ ಜೋಗಿ, ಕಾರ್ಯಾಧ್ಯಕ್ಷರಾದ ಲತೇಶ್, ಸುದೀರ್, ರಾಜ್ಯ ಪರಿಷತ್ ಸದಸ್ಯ ಅಂಬರೀಶ್, ಪುತ್ತೂರು ತಾಲೂಕು ಸಂಘದ ಖಜಾಂಚಿ ಚಂದ್ರ ನಾಯ್ಕ್ ಹಾಗೂ ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪುತ್ತೂರಿನಿಂದ ವರ್ಗಾವಣೆಗೊಂಡಿರುವ ಸಂಘದ ನಿರ್ದೇಶಕರಾದ ಅಬಕಾರಿ ಇಲಾಖೆಯ ವಿಜಯ ಕುಮಾರ್ ಹಾಗೂ ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್, ವಿಬಿ-ಜಿ-ರಾಮ್ಜಿ ಲೋಗೋ ವಿನ್ಯಾಸ ಮಾಡಿದ ರಾಮ್ಪ್ರಸಾದ್ ಕೆ., ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್., ವಿವಿಧ ಇಲಾಖೆಗಳು ನಿವೃತ್ತ ನೌಕರರಾದ ವಿಷ್ಣುಪ್ರಸಾದ್ ಸಿ., ಗಂಗಾಧರ ನಾಯ್ಕ್, ವಸಂತಿ ಬಿ.ಎಂ., ಗ್ರೆಟ್ಟಾ ಮಸ್ಕರೇನಸ್, ವೈ ಸಾಂತಪ್ಪ ಗೌಡ, ಲಿಂಗಮ್ಮ, ಪರಮೇಶ್ಚರಿ, ಬಾಲಕೃಷ್ಣ ಎನ್., ಎಸ್.ಹನುಮಂತಯ್ಯ ಬೇರಿಕೆ ಈಶ್ಚರ ಭಟ್, ಪದ್ಮಾಕ್ಷಿ, ಮನ್ಮಥ ಎ., ಪುಷ್ಪಾವತಿ ಕೆ., ಪಿ.ಕೆ ಲಕ್ಷ್ಮೀ, ಕುಸುಮಾವತಿ ಎ.ಬಿ., ಅಣ್ಣು ಪಿ., ವಿಶ್ವನಾಥ ಗೌಡ, ಪದ್ಮನಾಭ ಗೌಡ, ಪ್ರೋ.ಐವನ್ ಫ್ರಾನ್ಸಿಸ್ ಲೋಬೋ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಂಘದ ಉತ್ತಮ ಸಾಧನೆಗಾಗಿ ಜಿಲ್ಲಾ ಸಂಘದಿAದ ತಾಲೂಕು ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಅವರನ್ನು ಸನ್ಮಾನಿಸಿದರು.

ಪ್ರತಿಭಾ ಪುರಸ್ಕಾರ:
2025-26ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ತಾಲೂಕು ವ್ಯಾಪ್ತಿಯ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಎಸ್ಎಸ್ಎಲ್ಸಿಯಲ್ಲಿ ಅನನ್ಯ ಎ., ಸಾನ್ವಿ ಎಸ್ ಪ್ರಭು, ನಿರೀಕ್ಷಿತ್ ಹೆಗ್ಡೆ, ಮುಹಮ್ಮದ್ ನಜೀಬ್ ಅನ್ವರ್, ಭವಿಷ್ಯ್ ಪಿ.ಎಂ., ದ್ವಿತೀಯ ಪಿಯುಸಿಯಲ್ಲಿ ಶಾರ್ವರಿ ಆರ್.ಎಸ್., ಪಿ,ವಿ ವಿದಿಶಾ ಹಾಗೂ ಶಿಪಾಲಿ ರೈ ಪಿ. ಅವರಿಗೆ ನೀಡಿ ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ ವಂದಿಸಿದರು. ನಿರ್ದೇಶಕರಾದ ಶಾಲಿನಿ ಬಿ. ಹಾಗೂ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಸಾವಿತ್ರಿ, ಜಗನ್ನಾಥ್, ತನುಜಾ ಎಂ, ಜೂಲಿಯಾನ ಮೋರಾಸ್, ಜಯರಾಜ್ .ಕೆ.ಎಂ., ರಾಮಚಂದ್ರ ಬಿ., ಗಣೇಶ್ ಭಟ್, ಕೃಷ್ಣ ಬಿ., ರವಿಚಂದ್ರ ಯು., ಧರ್ಣಪ್ಪ ಗೌಡ, ಪ್ರತೀಕ್ ಎನ್.ಎಸ್., ಭರತ್, ಆಶಾ, ಸುಧೀರ್, ಕವಿತಾ ಪ್ರಮೋದ್ ಕುಮಾರ್, ಚಂದ್ರಶೇಖರ ನಾಯ್ಕ, ಡಾ|ಹರಿಪ್ರಸಾದ್, ಗಾಯತ್ರಿ, ದೀಪಿಕಾ ವಾಗ್ಲೆ, ಎಫ್ಜಿಎಂ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಮಹಾಸಭೆ:
ಅಭಿನಂದನಾ ಕಾರ್ಯಕ್ರಮ ಪ್ರಾರಂಭದಲ್ಲಿ ಸಂಘದ 2025-26ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ. ವರದಿ ಹಾಗೂ ಖಜಾಂಚಿ ಚಂದ್ರ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ಸಂಘದ ಗೌರವಾಧ್ಯಕ್ಷೆ ತನುಜಾ ಎಂ., ಕಾರ್ಯಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಹಿರಿಯ ಉಪಾಧ್ಯಕ್ಷರಾದ ರವಿಚಂದ್ರ ಯು., ಎಫ್ಜಿ.ಎಂ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ಸ್ವಾಗತಿಸಿ, ನಿರ್ದೇಶಕ ಕೃಷ್ಣ ಬಿ. ವಂದಿಸಿದರು.
ಮುಂದಿನ ಎರಡು ವರ್ಷದಲ್ಲಿ ಸಂಘವು ದಶಮಾನೋತ್ಸವ ಸಂಭ್ರಮಿಸಲಿದೆ. ಈ ಸಂದರ್ಭದಲ್ಲಿ ಸಂಘದ ಕಟ್ಟಡದಲ್ಲಿ ಲಿಫ್ಟ್, ಜನರೇಟರ್ ಅಳವಡಿಸುವ ಯೋಜನೆಯಿದೆ. ಇದಕ್ಕಾಗಿ ಸುಮಾರು ರೂ.30ಲಕ್ಷ ವೆಚ್ಚವಾಗಲಿದೆ. ಈ ವೆಚ್ಚಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ನ ಸಾಲ ಪಡೆಯಲು, ಸಂಘದ ಕಟ್ಟಡದಲ್ಲಿರುವ ಸಭಾ ಭವನದ ದರ ಪರಿಷ್ಕರಣೆ, ಈಗಾಗಲೇ ಸರಕಾರಿ ನೌಕರರಿಗೆ ರೂ.2000ರಿಯಾಯಿತಿ ಕಾರ್ಯಾಕಾರಿ ಸಮಿತಿಯ ಸದಸ್ಯರಿಗೆ ವಿಶೇಷ ರಿಯಾಯಿತಿ ನೀಡುವುದು ಹಾಗೂ ರಕ್ತದಾನ ಶಿಬಿರಗಳನ್ನು ನಡೆಸುವ ಬಗ್ಗೆ ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. ಸಂಘದ ಮುಂದಿನ ಯೋಜನೆಗಳಿಗೆ ಸದಸ್ಯರು ಸಹಕರಿಸಬೇಕು.
-ಶಿವಾನಂದ ಆಚಾರ್ಯ, ಸಂಘದ ಅಧ್ಯಕ್ಷರು










