ಉಪ್ಪಿನಂಗಡಿ: ಬಿದ್ದು ಸಿಕ್ಕಿದ ಪರ್ಸ್ ಹಿಂದುರಿಗಿಸದವನನ್ನು ಪತ್ತೆ ಹಚ್ಚಿದ ಪೊಲೀಸರು – ಚಿನ್ನಾಭರಣ ಪತ್ತೆ – ಹಣ ಮಾಯ

0

ಉಪ್ಪಿನಂಗಡಿ: ಕಡೇಶಿವಾಲಯ ನಿವಾಸಿ ವೀರಮ್ಮ ಎಂಬವರ ನಾಲ್ಕು ಪವನ್ ಚಿನ್ನ ಹಾಗೂ 35 ಸಾವಿರ ನಗದು ಇದ್ದ ಪರ್ಸ್ ಆ.28ರಂದು ಕಳೆದು ಹೋಗಿದ್ದು, ಇದನ್ನು ಹುಡುಕಿಕೊಡುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಇಲ್ಲಿನ ಬಸ್‌ನಿಲ್ದಾಣ ಬಳಿಯ ಮೀನು ಮಾರುಕಟ್ಟೆ ಬಳಿ ವೀರಮ್ಮ ಅವರು ಪರ್ಸ್ ಕಳೆದುಕೊಂಡಿದ್ದರು. ಬಳಿಕ ಪರ್ಸ್ ಕಳೆದುಕೊಂಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಲಕ್ಷ್ಮೀನಗರ ನಿವಾಸಿ ನವೀನ್ ಎಂಬಾತನಿಗೆ ಈ ಪರ್ಸ್ ಸಿಕ್ಕಿರುವುದು ದೃಢಪಟ್ಟಿತ್ತು. ಆತನ ಹುಡುಕಾಟದಲ್ಲಿದ್ದ ಪೊಲೀಸರಿಗೆ ಆತ ತನ್ನ ತಂದೆ ಚಿಕಿತ್ಸೆಗೆಗಾಗಿ ದಾಖಲಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿರುವುದು ದೃಢಪಟ್ಟಿತ್ತು. ಅಲ್ಲಿ ಹೋಗಿ ಪೊಲೀಸರು ಆತನನ್ನು ವಿಚಾರಿಸಿದಾಗ ತನಗೆ ಪರ್ಸ್ ಬಿದ್ದು ಸಿಕ್ಕಿಬಿದ್ದಿರುವುದು ಆತ ಒಪ್ಪಿಕೊಂಡಿದ್ದು, ಅದರಲ್ಲಿದ್ದ ಸುಮಾರು ನಾಲ್ಕು ಪವನ್‌ನಷ್ಟು ಚಿನ್ನಾಭರಣವನ್ನು ಹಿಂದುರಿಗಿಸಿದ್ದಾನೆ.ಆದರೆ ಅದರಲ್ಲಿದ್ದ ಹಣ ಮಾತ್ರ ಇರಲಿಲ್ಲ. ಕೊನೆಗೇ ‘ಪಾಲಿಗೆ ಬಂದಿದ್ದೇ ಪಂಚಾಮೃತ’ವೆಂದು ಪರ್ಸ್ ಕಳೆದುಕೊಂಡವರು ಚಿನ್ನಾಭರಣವನ್ನು ಪಡೆದು ಪ್ರಕರಣವನ್ನು ವಾಪಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here