






ಪುತ್ತೂರು: ಇತ್ತೀಚೆಗೆ ನಾಗರ ಪಂಚಮಿಗೆ ಸರಕಾರ ಪ್ರಾದೇಶಿಕ ರಜೆ ಘೋಷಣೆ ಮಾಡಿದಂತೆ ಸರಕಾರ ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾಗಿರುವ ಮೋಂತಿ ಫೆಸ್ಟ್ ಹಬ್ಬಕ್ಕೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರಾದೇಶಿಕ ರಜೆ ಘೋಷಿಸಬೇಕು ಎಂದು ಕ್ರಿಶ್ಚಿಯನ್ ಯೂನಿಯನ್ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಆಗ್ರಹಿಸಿದರು.
ಆ.31ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8ಲಕ್ಷ ಕ್ಯಾಥೋಲಿಕ್ ಕ್ರೈಸ್ತ ಸಮಾಜದವರಿದ್ದು ಮೋಂತಿ ಫೆಸ್ಟ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬವು ಕರಾವಳಿಯಲ್ಲಿ ಮುಖ್ಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಹಬ್ಬವಾಗಿದೆ.
ಕೋಮು ಸೌಹಾರ್ದತೆಯನ್ನು ಪ್ರತಿಪಾದಿಸುವ ಹಬ್ಬ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನಾಗರ ಪಂಚಮಿ ಹಬ್ಬಗಳ ಜೊತೆಗೆ ಆಚರಿಸಲ್ಪಡುವ ಹಬ್ಬವಾಗಿದೆ.ವಿವಿಧ ಧರ್ಮಗಳಲ್ಲಿ ವಿವಿಧ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.ಹೀಗಾಗಿ ಉಭಯ ಜಿಲ್ಲೆಗಳೊಳಗೆ ಸಾರ್ವಜನಿಕ ರಜೆ ಘೋಷಣೆ ಮಾಡುವುದು ನ್ಯಾಯಯುತವಾಗಿದೆ. ಇಡೀ ಕ್ಯಾಲೆಂಡರ್ ವರ್ಷದಲ್ಲಿ ಕ್ರೈಸ್ತರ ಹಬ್ಬಗಳಿಗೆ ಸರಕಾರಿ ರಜೆ ದೊರೆಯವುದು ಕ್ರಿಸ್‌ಮಸ್ ಹಾಗೂ ಗುಡ್‌ಫ್ರೈಡೆಗೆ ಮಾತ್ರ. ಮೋಂತಿ ಫೆಸ್ಟ್‌ನ್ನು ಪ್ರಾದೇಶಿಕ ಹಬ್ಬವಾಗಿ ಘೋಷಿಸಿ ರಜೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಜೆ ನೀಡುವಂತೆ ಮನವಿ ಮಾಡಿದಾಗ ಅವರು ಪರಿಮಿತ ರಜಾ ಪಟ್ಟಿಯಲ್ಲಿ ಸೇರಿಸಿದ್ದರು. ಇದನ್ನು ಪರಿವರ್ತಿಸಿ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಅನ್ವಯವಾಗುವಂತೆ ರಜೆ ಘೋಷಿಸುವಂತೆ ಹಲವು ಕ್ರೈಸ್ತ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ. ಬೆಂಗಳೂರಿನ ಕ್ರೈಸ್ತ ಮುಖಂಡರಾದ ಸ್ಟ್ಯಾನಿ ಪಿಂಟೋ, ಕ್ಯಾಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಅಲ್ವನ್ ಪಾನಿರ್ ಹಾಗೂ ಇನ್ನಿತರ ಮುಖಂಡರು ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯ ಕ್ರೈಸ್ತ ಮುಖಂಡರಾದ ಮಾಜಿ ಶಾಸಕ ಜೆ.ಆರ್ ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಸಚಿವ ಕೆ.ಜೆ ಜಾರ್ಜ್ ಅವರು ಇದರ ಬಗ್ಗೆ ಗಮನ ಹರಿಸಬೇಕು. ಕೃಷ್ಣ ಜನ್ಮಾಷ್ಟಮಿಗೆ ರಜೆ ನೀಡುವಂತೆ ಮುಖ್ಯಮಂತ್ರಿಗೆಳಿಗೆ ಮನವಿ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು 4 ಜಿಲ್ಲೆಗಳಿಗೆ ಅನ್ವಯವಾಗುವಂತೆ ಸೆ.8ರಂದು ಪ್ರಾದೇಶಿಕ ರಜೆ ನೀಡುವಂತೆ ಸರಕಾರವನ್ನು ಒತ್ತಾಯಿಸುವಂತೆ ಆಗ್ರಹಿಸಿದರು.
ಐವನ್ ಡಿ’ಸೋಜರಿಗೆ ಮುಖ್ಯ ಸಚೇತಕ ಹುದ್ದೆ ನೀಡಬೇಕು:
ಕರಾವಳಿ ಭಾಗದ ಕೊಂಕಣಿ ಬಾಷೆಯ ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯಕ್ಕೆ ಮಂತ್ರಿ ಮಂಡಲದಲ್ಲಿ ಪ್ರಾತಿನಿದ್ಯವಿಲ್ಲ.ಕೆ.ಜೆ ಜಾರ್ಜ್ ಒಬ್ಬರು ಮಾತ್ರ ಕ್ರೈಸ್ತ ಸಮುದಾಯ ಪ್ರತಿನಿಧಿಯಾಗಿದ್ದಾರೆ. ಇತರ ಜಾತಿಗಳ ಉಪ ಜಾತಿಗಳಿಗೂ ಪ್ರಾತಿನಿದ್ಯ ನೀಡಲಾಗುತ್ತುದೆ.ಆದರೆ ಕೊಂಕಣಿ ಭಾಷೆ ಮಾತನಾಡುವ ಕ್ರೈಸ್ತ ಸಮುದಾಯದವರಿಗೂ ಪ್ರಾತಿನಿಧಿಕ ಹುದ್ದೆ ನೀಡಬೇಕು.ಪ್ರಸ್ತುತ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಹುದ್ದೆ ಖಾಲಿಯಿದ್ದು ವಿಧಾನ ಪರಿಷತ್‌ನ ಏಕಮಾತ್ರ ಕ್ರೈಸ್ತ ಪ್ರತಿನಿಧಿಯಾಗಿರುವ, ಅನುಭವಿಯೂ ಆಗಿರುವ ಐವನ್ ಡಿ ಸೋಜ ಅವರಿಗೆ ಮುಖ್ಯ ಸಚೇತಕ ಹುದ್ದೆ ನೀಡಬೇಕು. ಇದರಿಂದ ಸರಕಾರಕ್ಕೂ ಪಕ್ಷಕ್ಕೂ ಅವರ ಅನುಭವದ ಲಾಭ ದೊರೆಯಲಿದೆ. ಅಲ್ಲದೆ ಕ್ರೈಸ್ತ ಸಮುದಾಯವು ಯಾವತ್ತೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಮುದಾಯಕ್ಕೂ ನ್ಯಾಯ ನೀಡಿದಂತಾಗುತ್ತದೆ ಎಂದು ಮೌರೀಸ್ ಮಸ್ಕರೇನಸ್ ಹೇಳಿದರು.
ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಜೋಕಿಂ ಲೂಯಿಸ್, ಗೌರವ ಸಕಹೆಗಾರ ವಲೇರಿಯನ್ ಡಯಾಸ್, ಕೋಶಾಧಿಕಾರಿ ವಾಲ್ಟರ್ ಡಿ ಸೋಜ, ಕಾರ್ಯದರ್ಶಿ ವಾಲ್ಟರ್ ಸಿಕ್ಚೇರಾ, ಸಲಹೆಗಾರ ಮೆಲ್ವಿನ್ ಫೆರ್ನಾಂಡೀಸ್, ಜಾನ್ ಕೆನ್ಯೂಟ್ ಮಸ್ಕರೇನಸ್












