






ಪೆರಾಬೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ಆಲಂಕಾರು ವಲಯದ ಕುಂತೂರು ಕಾರ್ಯಕ್ಷೇತ್ರದಲ್ಲಿ ಕೃಷಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.


ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು, ಬ್ಯಾಂಕಿನ ನಿಯಮಗಳು, ಸಂಘಗಳ ನಿರ್ವಹಣೆ, ಒಕ್ಕೂಟ ಪದಗ್ರಹಣ, ತಾಲೂಕು ಮಟ್ಟದಲ್ಲಿ ಕೆಸರು ಗದ್ದೆ ಕಾರ್ಯಕ್ರಮ ಆಯೋಜಿಸುವುದರ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಬಾಲಕೃಷ್ಣ ಹಾರ್ಪಾಳ ಅವರು ಮಾತನಾಡಿ, ರೈತರು ಏಕ ಕೃಷಿ ಅವಲಂಬಿಸದೆ ಸಮಗ್ರ ಕೃಷಿ ಮಾಡುವುದರಿಂದ ಮತ್ತು ಸಾವಯವ ಗೊಬ್ಬರಗಳನ್ನು ಅತೀ ಹೆಚ್ಚು ಬಳಸಿ ವ್ಯವಸಾಯ ಮಾಡುವುದರಿಂದ ಉತ್ತಮ ಗುಣಮಟ್ಟ ಬೆಳೆಗಳನ್ನು ಬೆಳೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.



ಸೇವಾಪ್ರತಿನಿಧಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕೃಷಿ ಮೇಲ್ವಿಚಾರಕರು ಸ್ವಾಗತಿಸಿದರು. ಆಲಂಕಾರು ವಲಯದ ಮೇಲ್ವಿಚಾರಕಿ ಲತಾ ವಂದಿಸಿದರು.










