







ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ ತಾಲೂಕು ಬಿಳಿನೆಲೆ ವಲಯದ ಜ್ಞಾನದೀಪ ಜ್ಞಾನವಿಕಾಸ ಕೇಂದ್ರದ ವತಿಯಿಂದ ಗೋಪಾಲಕೃಷ್ಣ ಸಭಾಭವನದಲ್ಲಿ ಸ್ವಉದ್ಯೋಗ ಪ್ರೇರಣೆ ಶಿಬಿರ ನಡೆಯಿತು.



ಕೇಂದ್ರದ ಸದಸ್ಯೆ ಪದ್ಮಾವತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಉತ್ತಮ ಅವಕಾಶಗಳು ಸಿಗುತ್ತಿದ್ದು ಬಳಸಿಕೊಳ್ಳುವಂತೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಮ್ಯಾ ಅವರು ಕರಕುಶಲ ವಸ್ತುಗಳ ತಯಾರಿ ಹಾಗೂ ಕೃತಕ ಆಭರಣ ತಯಾರಿಗಳ ಬಗ್ಗೆ ಪ್ರಾತ್ಯಕ್ಷತೆ ಹಾಗೂ ಮಾಹಿತಿ ನೀಡಿದರು. ಕೇಂದ್ರದ ಸದಸ್ಯೆ ಸುಜಾತ ಅವರು ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಭಜನಾ ಪರಿಷತ್ತಿನ ಬಿಳಿನೆಲೆ ವಲಯದ ಅಧ್ಯಕ್ಷ ಸತೀಶ್ಚಂದ್ರ, ವಲಯ ಮೇಲ್ವಿಚಾರಕ ರವಿ ಪ್ರಸಾದ್ ಆಲಾಜೆ, ಜ್ಞಾನವಿಕಾಸ ಸಮನ್ವಯಧಿಕಾರಿ ಚೇತನ ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು. ಕೇಂದ್ರದ ಸದಸ್ಯೆ ಪದ್ಮಾವತಿ ನಿರೂಪಿಸಿದರು. ಹೇಮಾವತಿ ಸ್ವಾಗತಿಸಿದರು. ಜ್ಞಾನವಿಕಾಸ ಸಂಯೋಜಕಿ ಉಷಾ ಅವರು ಜ್ಞಾನ ವಿಕಾಸ ಕೇಂದ್ರದ ವರದಿ ವಾಚಿಸಿ ವಂದಿಸಿದರು. ಈ ಹಿಂದೆ ಕರ್ತವ್ಯ ನಿರ್ವಹಿಸಿದ ಸೇವಾ ಪ್ರತಿನಿಧಿ ಸತೀಶ್ರವರನ್ನು ಸನ್ಮಾನಿಸಲಾಯಿತು. ಕೇಂದ್ರದಲ್ಲಿ ರಕ್ಷಾಬಂಧನ ಆಚರಿಸಲಾಗಿದ್ದು ಕೇಂದ್ರದ ಎಲ್ಲಾ ಸದಸ್ಯರಿಗೆ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಶುಭಕೋರಿದರು.













