ಶ್ರೀ ನಂದಗೋಕುಲ ಶಿಶು ಮಂದಿರದಲ್ಲಿ ರಕ್ಷಾ ಬಂಧನ ಮತ್ತು ಗುರುಪೂರ್ಣಿಮೆ

0

ಉಪ್ಪಿನಂಗಡಿ: ಪೆರಿಯಡ್ಕದ ಶ್ರೀ ನಂದಗೋಕುಲ ಶಿಶುಮಂದಿರದಲ್ಲಿ ರಕ್ಷಾ ಬಂಧನ ಮತ್ತು ಗುರುಪೂರ್ಣಿಮೆಯನ್ನು ಆಚರಿಸಲಾಯಿತು.


ರಾಷ್ಟ್ರ ಸೇವಾ ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿ ಸವಿತಾ ಪಿ.ಜಿ. ಭಟ್ ಮಾತನಾಡಿ, ಸಹೋದರತೆಯ ಸಂಬಂಧವನ್ನು ಬೆಸೆಯುವ ರಕ್ಷೆಯು ಸಮಾಜದ ಸಾಮರಸ್ಯಕ್ಕೂ ಪ್ರೇರಣೆ ನೀಡುವ ಶಕ್ತಿಯನ್ನು ಹೊಂದಿದೆ ಎಂದರು.


ಕಾರ್ಯಕ್ರಮದಲ್ಲಿ ಮಾತೃ ಮಂಡಳಿಯ ಅಧ್ಯಕ್ಷೆ ಅಶ್ವಿನಿ ಪದಾಳ , ಆಡಳಿತ ಸಮಿತಿ ಸದಸ್ಯರಾದ ಸತೀಶ್ ರಾವ್ ನೆಡ್ಚಿಲು, ಜಯಂತಿ ಭಟ್ ಪೆರಿಯಡ್ಕ, ಪೋಷಕರು, ಮಾತಾಜಿಗಳು ಪುಟಾಣಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here