ಸೆ.5 ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ  ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ

0

ಬಡಗನ್ನೂರುಃ  ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ಎಸ್.ಕೆ. ಫ್ರೆಂಡ್ಸ್, ಮುಡಿಪಿನಡ್ಕ ಶ್ರೀಕೃಷ್ಣ ಯುವಕಮಂಡಲ, ಪಟ್ಟೆ ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ, ಪಟ್ಟೆ ಶ್ರೀಕೃಷ್ಣ ಭಜನಾ ಮಂಡಳಿ, ಮುಡಿಪಿನಡ್ಕ ಅಯ್ಯಪ್ಪ ಭಜನಾ ಮಂಡಳಿ, ಪೆರಿಗೇರಿ ನವಚೈತನ್ಯ ಯುವಕಮಂಡಲ, ಪೆರಿಗೇರಿ ಇವುಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವು ಸೆ. 5 ರಂದು ಪಟ್ಟೆ. ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆಯಲಿರುವುದು.

ಕಾರ್ಯಕ್ರಮಗಳು

 ಸೆ.5 ರಂದು ಪೂರ್ವಾಹ್ನ ಗಂ 8 ರಿಂದ “ಶ್ರೀಕೃಷ್ಣ ಸ್ತುತಿ” (ಭಜನಾ ಕಾರ್ಯಕ್ರಮ) ಕಾರ್ಯಕ್ರಮವನ್ನು  ಪ್ರಗತಿಪರ ಕೃಷಿಕರಾದ  ಅಚ್ಯುತ ಭಟ್, ಪಾದೆಕರ್ಯ ಚಾಲನೆ ನೀಡಲಿದ್ದಾರೆ. ಭಜನಾ ಕಾರ್ಯಕ್ರಮದಲ್ಲಿ  ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ,  ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪಟ್ಟೆ (ಪಡುಮಲೆ), ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಪೆರಿಗೇರಿ,  ಶ್ರೀ ವರಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಮುಡಿಪಿನಡ್ಕ ಇದರ ಸದಸ್ಯರು ಭಾಗವಹಿಸಲಿದ್ದಾರೆ.

ಪೂರ್ವಾಹ್ನ 10 ರಿಂದ“ಶ್ರೀಕೃಷ್ಣ ವೇಷ ಸ್ಪರ್ಧೆ”

3ರಿಂದ 6 ವಯೋಮಾನದ ಮಕ್ಕಳಿಗೆ  ಮುದ್ದು ಕೃಷ್ಣ ಸ್ಪರ್ಧೆ ಹಾಗೂ 6ರಿಂದ 10 ವಯೋಮಾನದ  ಮಕ್ಕಳಿಗೆ ಬಾಲಕೃಷ್ಣ / ರಾಧಾಕೃಷ್ಣ  ಸ್ಪರ್ಧೆ  ನಡೆಯಲಿದೆ. 

ಮೊಸರು ಕುಡಿಕೆ ಸ್ಪರ್ಧೆ

5ನೇ ತರಗತಿಯಿಂದ 7ನೇ ತರಗತಿ ವರೆಗೆ ಮತ್ತು 8ನೇ ತರಗತಿಯಿಂದ 10ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ  ಮೊಸರು ಕುಡಿಕೆ ಸ್ಪರ್ಧೆ ನಡೆಯಲಿದೆ 

ಸಾರ್ವಜನಿಕರಿಗೆ:

ಪುರುಷರಿಗೆ ವಾಲಿಬಾಲ್ ಪಂದ್ಯಾಟವನ್ನು  ಕುಂಬ್ರ ಖ್ಯಾತ ಉದ್ಯಮಿ ರತನ್ ರೈ ಕುಂಬ್ರ,  ಚಾಲನೆ ನೀಡಲಿದ್ದಾರೆ. ಮಾತೆಯರಿಗೆ ಹಗ್ಗಜಗ್ಗಾಟ ಪಂದ್ಯಾಟವನ್ನು ಪಡುಮಲೆ  ಸ. ಹಿ. ಪ್ರಾ ಶಾಲಾ ನಿವೃತ್ತ ಮುಖ್ಯ ಗುರುಗಳಾದ ನಾರಾಯಣ ಪಾಟಾಳಿ  ಪಟ್ಟೆ ಚಾಲನೆ  ನೀಡಲಿದ್ದಾರೆ.

ಅಪರಾಹ್ನ ಗಂ 1 ರಿಂದ ಸಾರ್ವಜನಿಕ ಅನ್ನಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ ಗಂ 2 ರಿಂದ “ಶ್ರೀಕೃಷ್ಣ ರಥ” ಮೆರವಣಿಗೆ ನಡೆಯಲಿದೆ.ಪ್ರಗತಿಪರ ಕೃಷಿಕರಾದ  ಶಂಕರನಾರಾಯಣ ಪ್ರಸಾದ್, ಪಟ್ಟಾಜೆ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಶಾಲಾ ಆವರಣದಿಂದ ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂದಿರದವರೆಗೆ ನಡೆಯಲಿದೆ. ಮೆರೆವಣಿಗೆ ಕುಣಿತ ಭಜನೆ, ಅಟ್ಟಿಮಡಿಕೆ  ಬ್ಯಾಡ್ ವಾದ್ಯ ಘೋಷದ ಮೂಲಕ ಸಾಗಿ ಬರಲಿದೆ. 

ಅಪರಾಹ್ನ ಗಂ 12 ರಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.

ಅಭ್ಯಾಗತರಾಗಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘದ ಅಧ್ಯಕ್ಷ ನನ್ಯ  ಅಚ್ಯುತ ಮೂಡಿತ್ತಾಯ, ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ  ಜಿ  ಪರಮೇಶ್ವರ ಭಟ್‌ ಪ್ರಶಸ್ತಿ ಭಾಜನರಾದ ನಿಡಳ್ಳಿ ನಿವೃತ್ತ ಶಿಕ್ಷಕ ಡಾ. ಡಿ. ಸದಾಶಿವ ಭಟ್ಟ, ಪಳ್ಳು,ಭಾಗವಹಿಸಲಿದ್ದಾರೆ.

ಪುತ್ತೂರು ದ್ವಾರಕಾ ಪತಿಷ್ಠಾನದ ಕಾರ್ಯದರ್ಶಿ ಗಣರಾಜ ಕುಂಬ್ಳೆ , ಅಭಿನಂದನಾ ನುಡಿ ನೀಡಲಿದ್ದಾರೆ 

ಉಪಸ್ಥಿತರಾಗಿ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಶ್ವೇಶ್ ಹಿರಣ್ಯ, ಪ್ರತಿಭಾ ಪ್ರೌಢ ಶಾಲಾ ಮುಖ್ಯ ಗುರು ಸುಮನಾ ಬಿ., ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ರಾಜಗೋಪಾಲ ಎನ್, ಶ್ರೀಕೃಷ್ಣ ಆಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ಪುಷ್ಪಾವತಿ ಡಿ. ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here