







- ಸೆ.3 ಶ್ರೀಕೃಷ್ಣನ ಬೆಳ್ಳಿಯ ಛಾಯ ಬಿಂಬದ ಶೋಭಾಯಾತ್ರೆ
- ಸೆ.4 ದೇವರ ಪ್ರತಿಷ್ಠೆ, ಧಾರ್ಮಿಕ ಸಭೆ ಶ್ರೀಕೃಷ್ಣನ ತೊಟ್ಟಿಲೋತ್ಸವ
ಪುತ್ತೂರು: ಯಾದವ ಸಭಾ ಪ್ರಾದೇಶಿಕ ಸಮಿತಿ ಇದರ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಠಮಿಯ ಆಚರಣೆ `ವಿಂಶತಿ ಸಂಭ್ರಮೋತ್ಸವ’ ಶ್ರೀಕೃಷ್ಣ ದೇವರ ಬೆಳ್ಳಿಯ ಛಾಯಾ ಬಿಂಬದ ಶೋಭಾ ಯಾತ್ರೆ, ಸಮರ್ಪಣೆ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮಗಳೊಂದಿಗೆ ಸೆ.3 ಮತ್ತು 4ರಂದು ಆರ್ಲಪದವು ರಣಮಂಗಲ ಸಭಾ ಭವನದಲ್ಲಿ ಸಂಭ್ರಮಿಸಲಿದೆ.


ಕಾರ್ಯಕ್ರಮದ ಪ್ರಾರಂಭದ ದಿನವಾದ ಸೆ.3ರಂದು ಸಂಜೆ ಶ್ರೀಕೃಷ್ಣ ದೇವರ ಬೆಳ್ಳಿ ಛಾಯಾ ಬಿಂಬದ ಶೋಭಾಯಾತ್ರೆ ನಡೆಯಲಿದ್ದು ಬೆಳ್ಳಾರೆ ಗೌರಿ ಪುರಂ ಶ್ರೀರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯ ಆರ್ಲಪದವು ಶಾಲಾ ಬಳಿಯಿಂದ ಹೊರಟು ರಣಮಂಗಲ ಸಭಾ ಭವನದ ತನಕ ಸಾಗಲಿದೆ. ಬೆಟ್ಟಂಪಾಡಿ ಸಿದ್ದಿ ವಿನಾಯಕ ಕುಣಿತ ಭಜನಾ ತಂಡ, ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಮುರಳೀ ಬ್ರದರ್ಸ್ ಡಾನ್ಸ್ ಕ್ರ್ಯೂ ಇವರಿಂದ ಶ್ರೀಕೃಷ್ಣ ಲೀಲೋತ್ಸವ, ಸಿಂಗಾರಿ ಮೇಳ ಹಾಗೂ ವಿಶೇಷ ಆಕರ್ಷಕ ಸುಡುಮದ್ದು ಪ್ರದರ್ಶನವು ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಮೇಳೈಸಲಿದೆ. ಶೋಭಾಯಾತ್ರೆ ಆಗಮಿಸಿದ ಬಳಿಕ ವೇ.ಮೂ ಜ್ಯೋತಿಷಿ ಗೋಪಾಲಕೃಷ್ಣ ಅಡಿಗ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಇದೇ ಸಮಯದಲ್ಲಿ ವೇ.ಮೂ ಸುಬ್ರಹ್ಮಣ್ಯ ಕಾರಂತ ಮಂಗಳೂರು ಅವರಿಂದ ಸಂಕೀರ್ತನೆ ಹಾಗೂ ಅವಧಾನಿ ನಡೆಯಲಿದೆ. ರಾತ್ರಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಲಪದವು ಶ್ರೀದುರ್ಗಾ ಹೊಟೇಲ್ನ ಮ್ಹಾಲಕ ಶಿವರಾಮ ಮಣಿಯಾಣಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಂಶತಿ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಮಣಿಯಾಣಿ ದೇವಸ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ಲಪದವು ಕಿನ್ನಿಮಾಣಿ-ಪೂಮಾಣಿ ಪಿಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಆರ್ಲಪದವು ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ ರೈ ಕೋಟೆ, ವಾಕ್-ಶ್ರವಣ ತಜ್ಞ ಡಾ.ಅಖಲೇಶ್ ಪಾಣಾಜೆ, ಆರ್ಲಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಕಡಮಾಜೆ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಗೀತಾ ರಮಾನಾಥ ರೈ ಅತಿಥಿಗಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.



ವಿಂಶತಿ ಸಂಭ್ರಮದ ಎರಡನೇ ದಿನವಾದ ಸೆ.4ರಂದು ಬೆಳಿಗ್ಗೆ ಪುಣ್ಯಾಹ ಗಣಪತಿ ಹವನ, ಷಡಕ್ಷರ ಹವನ. ಶ್ರೀ ದೇವರ ಪ್ರತಿಷ್ಠೆ, ಹವಣ ಪೂರ್ಣಾಹುತಿ, ಉಪಾಹಾರ, ಆರ್ಲಪದವು ಕಾರ್ತಿಕೇಯ ಮಹಿಳಾ ಭಜನಾ ಸಂಘದವರಿಂದ ಭಜನೆ, ನಂತರ ಮಕ್ಕಳು, ಮಹಿಳೆಯರು, ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಕಲ್ಪೋಕ್ತಪೂಜೆ, ಮಧ್ಯಾಹ್ನ ಪ್ರಸನ್ನಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಅಪರಾಹ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಉದ್ಘಾಟಿಸಲಿದ್ದಾರೆ. ಆರ್ಲಪದವು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಧನಂಜಯ ಮಣಿಯಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಶ್ರೀರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರಿ ಮುಲ್ಕಿ, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಸಹಿತ ಹಲವು ಮಂದಿ ಗಣ್ಯರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ದೀಪಾರಾಧನೆ, ಸಂಕೀರ್ತನಾ ಸೇವೆ, ಅಷ್ಟಾವಧಾನ ಸೇವೆ, ಷೋಡಶೋಪಚಾರ ಪೂಜೆ, ಆರ್ಘ್ಯಪ್ರದಾನ ಸೇವೆಯೊಂದಿಗೆ ಶ್ರೀಕೃಷ್ಣ ದೇವರ ತೊಟ್ಟಿಲ ಸೇವೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಂಶತಿ ಸಂಭ್ರಮೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.










