ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಇಂಟರ್‌ಶಿಪ್ ಮತ್ತು ಕೌಶಲ್ಯ ಅಭಿವೃದ್ಧಿ ಸೆಮಿನಾರ್

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ ನಿರ್ಮಾಣ್ ಆರ್ಗನೈಸೇಶನ್ ” ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಇಂಟರ್‌ಶಿಪ್ ಮತ್ತು ಭವಿಷ್ಯದ ಕೌಶಲ್ಯ ಅಭಿವೃದ್ಧಿ ಕುರಿತು ವಿಶೇಷ ಮಾಹಿತಿ ಸೆಮಿನಾರ್ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ಮಾಣ್ ಆರ್ಗನೈಸೇಶನ್‌ನ ಪ್ಲೇಸ್‌ಮೆಂಟ್ ಆಫೀಸರ್ ಅರುಣ್, ಟ್ರೈನರ್ ಅನಿಲ್ ಅವರು “ ಎಲ್ಲಾ ಸಂದರ್ಭಗಳಲ್ಲೂ ಕೇವಲ ಮುಗ್ಧತೆ ನಮಗೆ ಸಹಾಯಕ್ಕೆ ಬರುವುದಿಲ್ಲ, ಅದರೊಂದಿಗೆ ಕೌಶಲ್ಯ ಅಭಿವೃದ್ಧಿ ಅತ್ಯಂತ ಅಗತ್ಯ. ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ನಾವು ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ಗುರಿಗಳ ಕಡೆ ಗಮನ ಹರಿಸಬೇಕು “ ಎಂದು ಕರೆ ನೀಡಿದರು.



ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಉಷಾಕಿರಣ್, ಪ್ರಶಾಂತ್ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here