ಪುಣ್ಚಪ್ಪಾಡಿ ಶಾಲೆಯ ಶತಸಂಬಂಧ ಮನವಿ ಪತ್ರ ಬಿಡುಗಡೆ – 1 ಕೋಟಿ ಯೋಜನೆಗೆ ಚಾಲನೆ

0

ಪುತ್ತೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿಯ ಶತಮಾನೋತ್ಸವದ ಅಂಗವಾಗಿ “ಶಾಲೆ ಪುಣ್ಚಪ್ಪಾಡಿಯ ಶತ ಸಂಬಂಧ” ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಹಾಗೂ 99ನೇ ಹುಟ್ಟುಹಬ್ಬದ ಆಚರಣೆ ನಡೆಯಿತು.

ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಹಾಗೂ ಶಾಲಾ ಆಡಳಿತ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಪಿ.ಡಿ. ಅವರು 99ನೇ ಹುಟ್ಟುಹಬ್ಬದ ಮೊದಲ ದೀಪ ಬೆಳಗಿ ಮಾತನಾಡಿ, ಪೋಷಕರು ಹಾಗೂ ಊರವರ ಸಹಕಾರದೊಂದಿಗೆ ಶತಮಾನೋತ್ಸವ ಅದ್ಧೂರಿಯಾಗಿ ನಡೆಯಲಿ ಎಂದರು.

ಸವಣೂರು ಕ್ಲಸ್ಟರ್‌ನ ಸಿಆರ್‌ಪಿ ಜಯಂತ್ ವೈ ಅವರು ಶತಸಂಬಂಧ ಮನವಿ ಪತ್ರ ಬಿಡುಗಡೆಗೊಳಿಸಿ, “ಪುಣ್ಚಪ್ಪಾಡಿ ಶಾಲೆ ನಮ್ಮೆಲ್ಲರ ಹೆಮ್ಮೆಯ ಶಾಲೆ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.ಗ್ರಾ.ಪಂ. ಮಾಜಿ ಸದಸ್ಯ ಗಿರಿಶಂಕರ ಸುಲಾಯ ಅವರು ಶತಮಾನೋತ್ಸವದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರೀಶ್ ತೋಟತ್ತಡ್ಕ, ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಕುಚ್ಚೆಜಾಲು ಶುಭ ಹಾರೈಸಿದರು.1927ರಲ್ಲಿ ಆರಂಭವಾದ ಶಾಲೆಯ 99ನೇ ಹುಟ್ಟುಹಬ್ಬವನ್ನು “ಶಾಲೆ ಪುಣ್ಚಪ್ಪಾಡಿಯ ಶತ ಬಂಧ! ಊರವರೆಲ್ಲರ ಪ್ರೀತಿಯ ಬಂಧ” ಎಂಬ ಆಶಯದೊಂದಿಗೆ ಊರ ಗಣ್ಯರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಜೊತೆಗೂಡಿ 99 ಹಣತೆ ಹಚ್ಚಿ, 100ನೇ ದೀಪ ಬೆಳಗುವ ಮೂಲಕ ಶತಮಾನೋತ್ಸವಕ್ಕೆ ಮುನ್ನುಡಿ ಬರೆದರು.

ದೇಣಿಗೆ ಘೋಷಣೆ: ಶತಮಾನೋತ್ಸವ ನಿಧಿಗೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಪಿ.ಡಿ. – ರೂ.1 ಲಕ್ಷ, ಉಪಾಧ್ಯಕ್ಷ ಹರೀಶ್ ತೋಟತ್ತಡ್ಕ – ರೂ.50 ಸಾವಿರ, ಸಿಆರ್‌ಪಿ ಜಯಂತ್ ವೈ – ರೂ.10 ಸಾವಿರ ಘೋಷಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಯಮುನಾ, ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರಶ್ಮಿತಾ ಜೈನ್ ನರಿಮೊಗರು ನಿರೂಪಿಸಿದರು, ಶಿಕ್ಷಕಿ ಶೋಭಾ ಕೆ. ವಂದಿಸಿದರು. ಅತಿಥಿ ಶಿಕ್ಷಕಿಯರಾದ ಲೀಲಾವತಿ, ಭಾಗೀರಥಿ, ಭವಾನಿ ಕೆ. ಸಹಕರಿಸಿದರು.

ಯೋಜನೆಗಳ ಅಂದಾಜು ಮೌಲ್ಯ (ಒಟ್ಟು 1 ಕೋಟಿ):ಶಾಲಾ ತೋಟ ನಿರ್ಮಾಣ – 5 ಲಕ್ಷ (ನಿರ್ಮಾಣ ಪೂರ್ಣ, ನಿರ್ವಹಣೆಯಲ್ಲಿದೆ)3 ಕೊಠಡಿ ನಿರ್ಮಾಣ ಮತ್ತು ತಾರಸೀಕರಣ – 50 ಲಕ್ಷ (ಒಂದು ಕೊಠಡಿಗೆ 17.5 ಲಕ್ಷ ಇಲಾಖೆಯಿಂದ ಬಿಡುಗಡೆ)ಶಾಲಾ ಸಭಾಂಗಣ – 15 ಲಕ್ಷಆಟದ ಮೈದಾನ ವಿಸ್ತರಣೆ ಮತ್ತು ಉದ್ಯಾನ – 8 ಲಕ್ಷಕಂಪ್ಯೂಟರ್ ಶಿಕ್ಷಣ – 2 ಲಕ್ಷಪೂರ್ವ ಪ್ರಾಥಮಿಕ ತರಗತಿಗಳು – 5 ಲಕ್ಷಶತ ಗಿಡಗಳ ನಾಟಿ – 2 ಲಕ್ಷನೂರು ಕಾರ್ಯಕ್ರಮಗಳು – 2 ಲಕ್ಷಮಕ್ಕಳ ಸಮಗ್ರ ಶೈಕ್ಷಣಿಕ ಯೋಜನೆ – 10 ಲಕ್ಷ (ವಾಹನ ಹೊರತುಪಡಿಸಿ)ಶತಸಂಬಂಧ ಕಾರ್ಯಕ್ರಮ – 2 ಲಕ್ಷ ಒಟ್ಟು 1 ಕೋಟಿ ರೂ.ಗಳ ಪೈಕಿ 30 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here