






ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಬಾವಿ ಸಭೆಯು ಪುತ್ತೂರು ತಾಲೂಕು ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.


ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯರ ಆಶೀರ್ವಾದದಿಂದ ಭಜನೆಯ ಜೊತೆಗೆ ಭಜಕರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.




ತಾಲೂಕು ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ ಯವರು ಸಭಾದ್ಯಕ್ಷತೆ ವಹಿಸಿ ಮಂದಿರಗಳ ಬಗೆಗಿನ ಅಭಿವೃದ್ದಿಯ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಕುರಿತು ಮಾಹಿತಿ ನೀಡಿದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಪಿ ಚಂದ್ರಶೇಖರ್ ಸಾಲ್ಯಾನ್ ರವರು ಜಾತಿ, ಮತ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕುಳಿತು ಚಪ್ಪಾಳೆ ತಟ್ಟುತ್ತಾ ಹಾಡುವುದರಿಂದ ಸಮಾನತೆ ಬೆಳೆಯುತ್ತದೆ.ಯುವ ಪೀಳಿಗೆಗೆ ನಮ್ಮ ಪುರಾಣ, ಇತಿಹಾಸ ಮತ್ತು ಭಕ್ತಿ ಸಾಹಿತ್ಯವನ್ನು ಪರಿಚಯಿಸಲು ಇದು ಉತ್ತಮ ವೇದಿಕೆ. ಪರಿಷತ್ ಕೇವಲ ಭಜನೆಗೆ ಸೀಮಿತವಾಗದೆ, ಸಂಘಟನೆಯ ಮೂಲಕ ದೇವಸ್ಥಾನ,ಮಂದಿರ ಸ್ವಚ್ಛತಾ ಅಭಿಯಾನ, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತದಂತಹ ಸಾಮಾಜಿಕ ಕೆಲಸಗಳನ್ನು ಮಾಡಬಹುದು ಎಂದರು.
ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು 28ನೇ ವರ್ಷದ ಭಜನಾ ಕಮ್ಮಟದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದರು.ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.ತಾಲೂಕಿನ ಎಲ್ಲಾ ವಲಯ ಪದಾಧಿಕಾರಿಗಳು,ಭಜನಾ ಮಂಡಳಿಗಳ ಸದಸ್ಯರು,ಮೇಲ್ವಿಚಾರಕರು,ಮತ್ತಿತರರು ಉಪಸ್ಥಿತರಿದ್ದರು. ಸೋಹನ್ ರವರು ಧನ್ಯವಾದವಿತ್ತರು.ಗಿರೀಶ್ ರವರು ಕಾರ್ಯಕ್ರಮ ನಿರೂಪಿಸಿದರು.










