






ಪುತ್ತೂರು: ಅಶ್ವ ಫ್ರೆಂಡ್ಸ್ (ರಿ.) ಬೀರನಹಿತ್ಲು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮೊಸರು ಕುಡಿಕೆ ಉತ್ಸವ-2026 ಸೆ.6 ರಂದು ಚಿಕ್ಕಮುಡ್ನೂರು ಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು.



ಸೂರ್ಯನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಶ್ವ ಫ್ರೆಂಡ್ಸ್ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಪತ್ ಕುಮಾರ್ ಜೈನ್, ಸುಂದರ ಪೂಜಾರಿ ಬಡಾವು, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಲೋಬೊ ಶುಭ ಹಾರೈಸಿದರು.




ತೆಂಗಿನಕಾಯಿ ಹೊಡೆಯುವ ಮೂಲಕ ಶೀನಪ್ಪ ಪೂಜಾರಿ ಆರಿಗ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಗೌರವಾಧ್ಯಕ್ಷ ಉದ್ಯಮಿ ರಾಜು ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ, ಶೀನಪ್ಪ ಪೂಜಾರಿ ಆರಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೊದಲ ಬಾರಿ ನಡೆದ ಅಷ್ಟಮಿ ಕ್ರೀಡಾಕೂಟದಲ್ಲಿ ಪುಟಾಣಿ ಮಕ್ಕಳಿಗೆ ಮುದ್ದು ರಾಧಾ-ಕೃಷ್ಣ ಸ್ಪರ್ಧೆ ಆಕರ್ಷಣೆಯಾಗಿತ್ತು. 25ಕ್ಕೂ ಹೆಚ್ಚು ಪುಟಾಣಿಗಳು ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯದರ್ಶಿ ವಸಂತ್ ಪೂಜಾರಿ ಅನಂತಿಮಾರು ವಂದಿಸಿದರು, ಅಣ್ಣಿ ಪೂಜಾರಿ ನಿರೂಪಿಸಿದರು. ನೂರಾರು ಮಂದಿ ಭಾಗವಹಿಸಿದ್ದರು.










