ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಳಮದ್ದಳೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ವತಿಯಿಂದ “ಯಕ್ಷ ಶ್ರಾವಣ -5” ತಾಳಮದ್ದಳೆ ದೇವಳದ ರಾಜಗೋಪುರದಲ್ಲಿ ಸೆ.7ರಂದು ನಡೆಯಿತು.


“ಸೀತಾಪಹಾರ”ಎಂಬ ಆಖ್ಯಾನದೊಂದಿಗೆ ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣಮೂಲೆ, ಶಿವಪ್ರಸಾದ್ ನಾಕೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ , ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ , ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್(ಮಾರೀಚ) , ಗುಡ್ಡಪ್ಪ ಬಲ್ಯ (ರಾವಣ), ಶುಭಾ ಅಡಿಗ (ಶ್ರೀ ರಾಮ), ಭಾಸ್ಕರ ಬಾರ್ಯ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ಸೀತೆ), ದುಗ್ಗಪ್ಪ ನಡುಗಲ್ಲು (ಸನ್ಯಾಸಿ ರಾವಣ), ವೇಣುಗೋಪಾಲ್ ಭಟ್ ಮಾಂಬಾಡಿ (ಲಕ್ಷ್ಮಣ) ಅಚ್ಯುತ ಪಾಂಗಣ್ಣಾಯ (ಜಟಾಯು) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಸಹಕರಿಸಿದರು.

LEAVE A REPLY

Please enter your comment!
Please enter your name here