ಬರೆಕರೆ ದಿ.ಚಂದ್ರಶೇಖರ ಭಟ್ ಅವರ ಶ್ರದ್ಧಾಂಜಲಿ

0

ಪುತ್ತೂರು: ಬರೆಕರೆ ಚಂದ್ರಣ್ಣ ಎಂದೇ ಚಿರಪರಿಚಿತರಾಗಿದ್ದ ಹಿರಿಯರಾದ ದಿ. ಚಂದ್ರಶೇಖರ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಂದ್ರಶೇಖರ ಭಟ್ ಅವರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಭಾಗದ ಜನರಿಗೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭೆಯ ಮಾಜಿ ಕಾರ್ಯದರ್ಶಿಯಾಗಿ ಹವ್ಯಕ ಸಮಾಜದ ಬೆಳವಣಿಗೆಗೆ ಶ್ರಮಿಸಿದ್ದರು.ಮಹಾಸಭೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಕೋಣೆತೋಟ ಮಹಾಬಲೇಶ್ವರ ಭಟ್ ಅಧ್ಯಕ್ಷರಾಗಿದ್ದಾಗ ಚಂದ್ರಶೇಖರ ಭಟ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಅವರ ಅವಧಿಯಲ್ಲಿ ಕಾವು ಸಮೀಪದ ನನ್ಯದಲ್ಲಿ ಮಹಾಸಭೆಗೆ ನಿವೇಶನ ಖರೀದಿಸಿ, ಸಭಾಭವನ ನಿರ್ಮಾಣದ ಕನಸಿಗೆ ಅಡಿಪಾಯ ಹಾಕಲಾಗಿತ್ತು.ದಿ. ಚಂದ್ರಶೇಖರ ಭಟ್ ಅವರ ಸೇವೆ ಮತ್ತು ಮಾರ್ಗದರ್ಶನವನ್ನು ಸಭೆಯಲ್ಲಿ ಸ್ಮರಿಸಲಾಯಿತು.ವೆಂಕಟಕೃಷ್ಣ ಎಂ.ಎನ್. ಹಾಗೂ ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭೆಯ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here