






ನೆಲ್ಯಾಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಕೌಕ್ರಾಡಿ ಹಾಗೂ ಇಚ್ಲಂಪಾಡಿ ಗ್ರಾಮಸ್ಥರು ಸೆ.8ರಂದು ಕೌಕ್ರಾಡಿ ಗ್ರಾಮ ಪಂಚಾಯತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.


ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ಗ್ರಾ.ಪಂ.ಕಾರ್ಯದರ್ಶಿ ದೇವಿಕಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಧಾಕೃಷ್ಣ ಕೆರ್ನಡ್ಕ, ನಾಗೇಶ್ ನಳಿಯಾರ್, ವರ್ಗೀಸ್ ಅಬ್ರಹಾಂ, ಕುಶಾಲಪ್ಪ ಗೌಡ ಅನಿಲ, ಸಿದ್ದೀಕ್ ನೆಲ್ಯಾಡಿ, ಇಸ್ಮಾಯಿಲ್ ನೆಲ್ಯಾಡಿ, ಬಿಜುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.













