






ವಿಟ್ಲ: ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ವಿಟ್ಲ ಶಾಖೆ ಪ್ರಸ್ತುತಪಡಿಸುವ ‘ನೃತ್ಯೋಹಂ’ ವರ್ಷ ಸಂಭ್ರಮ-10 ಕಾರ್ಯಕ್ರಮ ಶನಿವಾರ ವಿಟ್ಲ ಶ್ರೀಭಗವತಿ
ದೇವಸ್ಥಾನದಲ್ಲಿ ನಡೆಯಿತು.



ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಅವರು ಉದ್ಘಾಟಿಸಿ, ಸಂಗೀತ, ನೃತ್ಯ ಕಾರ್ಯಕ್ರಮಗಳು ಸದಾ ನಡೆಯುತ್ತಿರಬೇಕು. ಸಾಂಸ್ಕೃತಿಕವಾಗಿ ಯುವ ಪೀಳಿಗೆ ಇನ್ನಷ್ಟು ಹತ್ತಿರವಾಗಬೇಕು
ಎಂದು ಆಶಿಸಿದರು. ಶ್ರೀಭಗವತಿ ದೇವಸ್ಥಾನದ ಮುಖ್ಯಸ್ಥ ಕೇಶವ ಅವರು ಶ್ರೀದೇವಿಯ ಪ್ರಸಾದ ನೀಡಿ ಕಲಾವಿದರನ್ನು ಗೌರವಿಸಿದರು.





ವಿಟ್ಲ ಶಾಖೆಯ ದಶಮಾನೋತ್ಸವ ಸಲುವಾಗಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ರಮೇಶ್ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ವಂದಿಸಿದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರ ನಟುವಾಂಗ ಹಾಗೂ ನೃತ್ಯ ನಿರ್ದೇಶನದಲ್ಲಿ ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು,
ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ಕೊಳಲಿನಲ್ಲಿ ವಿದ್ವಾನ್ ಕೃಷ್ಣ,ಗೋಪಾಲ್ ಸಾಥ್ ನೀಡಿದರು.










