ವೈಟ್ ಲಿಫ್ಟಿಂಗ್: ಬಾಲಕಿಯರ ವಿಭಾಗದಲ್ಲಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ – ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ 

0

 ಬಡಗನ್ನೂರು :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇವರ ಸಯುಕ್ತ ಆಶ್ರಯದಲ್ಲಿ ನಡೆದ 17ರ ವಯೋಮಾನದೊಳಗಿನ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆ ಬಾಲಕಿಯರ ವಿಭಾಗದಲ್ಲಿ  ಮೊದಲ ಬಾರಿಗೆ  ಸಮಗ್ರ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ :
ನಾಲ್ಕು ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ನಡೆಯುವ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. 

48 ಕೆಜಿ ಭಾಗದಲ್ಲಿ  ಶ್ರೀಷಾ ಸದಾನಂದ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಕಕ್ಕೆಬೆಟ್ಟು ಸದಾನಂದ ಆಚಾರ್ಯ ಹಾಗೂ  ಶ್ರೀಲತಾ ದಂಪತಿಯ ಪುತ್ರಿ. 53 ಕೆಜಿ ಭಾಗದಲ್ಲಿ  ವರ್ಷ ರೈ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಈಕೆ ಬಜ  ವಿಜಯಕುಮಾರ್ ಮತ್ತು  ಶಶಿಕಲಾ ವೈಷ್ಣವಿ ಇವರ ದಂಪತಿಯ ಪುತ್ರಿ. 58 ಕೆಜಿ ಭಾಗದಲ್ಲಿ  ವೈಷ್ಣವಿ ಪ್ರಥಮ ಸ್ಥಾನ ಪಡೆದು ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ . ಈಕೆ ಐತನಡ್ಕ  ವಸಂತ ಹಾಗೂ  ಸುರೇಖಾ ದಂಪತಿಯವರ ಪುತ್ರಿ. 77 ಕೆಜಿ ಭಾಗದಲ್ಲಿ  ಅಕ್ಷತಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈಕೆ ಈಶ್ವರ ಮಂಗಳ ಕಲ್ಲು ಗುಡ್ಡೆ  ರಮೇಶ್ ಹಾಗೂ  ಗುಲಾಬಿ ದಂಪತಿಗಳ ಪುತ್ರಿ. 44 ಕೆಜಿ ಭಾಗದಲ್ಲಿ ಕುಮಾರಿ ಸ್ವಪ್ನ ಬೆಳ್ಳಿ ಪದಕದೊಂದಿಗೆ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈಕೆ ಪದಡ್ಕ  ಮಹೇಶ ಮತ್ತು  ಪುಷ್ಪ ದಂಪತಿಗಳ ಪುತ್ರಿ. ಹುಡುಗರ ವಿಭಾಗದಲ್ಲಿ ಕನ್ನಡ್ಕ ದಯಾನಂದ ಹಾಗೂ  ಶುಭಲತಾ ದಂಪತಿಗಳ ಪುತ್ರ. ದಿಶಾನ್ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಜ ಪದ್ಮನಾಭ ಹಾಗೂ  ರಾಧಾ ದಂಪತಿಗಳ ಪುತ್ರ ಪ್ರಮೀತ್ ರೈ ಕಂಚಿನ ಪದಕ ಜೊತೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವರಿಗೆ  ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಂಚೆ ಇಲಾಖೆಯ ನಿವೃತ್ತ ನೌಕರ ರಾಷ್ಟ್ರೀಯ ವೇಟ್ ಲಿಫ್ಟರ್  ಕೃಷ್ಣಪ್ಪ ಗೌಡ ಡೆಂಬಾಳೆ ತರಬೇತಿಯ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯ ಸುಕೇಶ್ ರೈ ಎನ್ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here