







ಪುತ್ತೂರು : ಸವಣೂರು ಗ್ರಾಮ ಪಂಚಾಯತ್ ನಲ್ಲಿ ಲೆಕ್ಕಸಹಾಯಕರಾಗಿ, ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಇತ್ತೀಚಿಗೆ ಸೇವಾ ನಿವೃತ್ತಿ ಹೊಂದಿದ ಮನ್ಮಥ ಅಜಿರಂಗಳ ಅವರನ್ನು ಸೆ. 7 ರಂದು ಸವಣೂರು ಗ್ರಾ. ಪಂ, ಸಭಾಭವನದಲ್ಲಿ ಸಮರ್ಥ ಜನ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಮತ್ತು ಸವಣೂರು ಯುವಕ ಮಂಡಲದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಸಮರ್ಥ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಗಿರಿಶಂಕರ್ ಸುಲಾಯ ಅವರು ಸನ್ಮಾನಿತರ ಪರಿಚಯಗೈದರು. ಸನ್ಮಾನ ಸ್ವೀಕರಿಸಿದ ಮನ್ಮಥ ಅವರು ಕೃತಜ್ಞತೆ ಸಲ್ಲಿಸಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಹುಕ್ಕೇರಿ, ಸವಣೂರು ಗ್ರಾ.ಪಂ, ಆಡಳಿತಾಧಿಕಾರಿ ಹರೀಶ್, ಅಭಿವೃದ್ಧಿ ಅಧಿಕಾರಿ ಗುರುವ, ಲೆಕ್ಕ ಸಹಾಯಕರಾದ ಜಯಂತಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷರುಗಳಾದ ರಾಜೀವಿ ಶೆಟ್ಟಿ, ಸುಂದರಿ , ಮಾಜಿ ಸದಸ್ಯರುಗಳಾದ ಚಂದ್ರಾವತಿ ಸುಣ್ಣಾಜೆ, ಅಬ್ದುಲ್ ರಜಾಕ್ ಕೆನರಾ, ತೀರ್ಥರಾಮ ಕೆಡೆಂಜಿ, ರಫೀಕ್ ಎಂ.ಎ, ಮಾಂತೂರು, ಬಾಬು ಸವಣೂರು, ಭರತ್ ರೈ ಪಾಲ್ತಾಡಿ, ಸತೀಶ್ ಅಂಗಡಿಮೂಲೆ, ತಾರಾನಾಥ ಬೊಳಿಯಾಲ, ಹರಿಕಲಾ ರೈ, ವಿನೋದ ರೈ, ಸವಣೂರು ಗ್ರಾ.ಪಂ, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಯತೀಶ್ ಕೊಂಬಕೆರೆ, ಜಯ ಸವಣೂರು, ಜಯಶ್ರೀ ಉಪಸ್ಥಿತರಿದ್ದರು.













