ಪಾಲ್ತಾಡು: ಶ್ರೀ ವಿಷ್ಣುಮಿತ್ರ ವೃಂದದಿಂದ 15ನೇ ವರ್ಷದ ಮೊಸರುಕುಡಿಕೆ ಸಂಭ್ರಮ

0

ಪಾಲ್ತಾಡು: ಶ್ರೀ ವಿಷ್ಣುಮಿತ್ರ ವೃಂದ (ರಿ.) ಪಾಲ್ತಾಡು ವಿಷ್ಣುನಗರ ಇದರ ವತಿಯಿಂದ 15ನೇ ವರ್ಷದ ಮೊಸರುಕುಡಿಕೆ ಕಾರ್ಯಕ್ರಮ ಅಷ್ಟಮಿ ಮೈದಾನ ಪಾಲ್ತಾಡುನಲ್ಲಿ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ 8.30ಕ್ಕೆ ಜಗನ್ನಾಥ ರೈ ಮಣಿಕ್ಕಾರ, ರಾಮಣ್ಣ ನಾಯ್ಕ್, ಸುಧಾಮ ಮಣಿಯಾಣಿ ದೀಪ ಪ್ರಜ್ವಲನೆ ನೆರವೇರಿಸಿದರು. ಬಳಿಕ ಭಜನಾ ಕಾರ್ಯಕ್ರಮ, ಕೃಷ್ಣ ವೇಷ ಸ್ಪರ್ಧೆ ಹಾಗೂ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.ಸಂಜೆ 6 ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದೇವಿಪ್ರಸಾದ್ ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂದಿರಾ ಕಲ್ಲೂರಾಯ, ವಿಜಯ ರೈ ನೆಲ್ಯಾಜೆ, ರೋಷನ್ ಬಂಗೇರ, ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀನ್ ವೇದಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here