







ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ತಾರಾನಾಥ ಕಂಪರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೆ.10 ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದೆ. ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಪ್ರಥಮ ದರ್ಜೆ ಸಹಾಯಕ ವಿಲಾಸ್ರವರು ಚುನಾವಣಾ ಅಧಿಕಾರಿಯಾಗಿ ಈ ಆಯ್ಕೆಯನ್ನು ಘೋಷಿಸಿದರು. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಶಶಿಧರ ರಾವ್ ಬೊಳಿಕ್ಕಲರವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತುರವರ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದ್ದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು ಈ ಸ್ಥಾನಕ್ಕೆ ಇದೀಗ ತಾರಾನಾಥ ಕಂಪರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾರಾನಾಥ ಕಂಪರವರನ್ನು ನಿರ್ದೇಶಕರಾದ ರಿತೇಶ್ ಮೇರ್ಲ ಸೂಚಿಸಿ, ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳಜ್ಜ ಅನಮೋದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ನಿರ್ದೇಶಕರು, ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಎಸ್.ಬಿ.ಜಯರಾಮ ರೈ ಬಳಜ್ಜರವರು, ಪ್ರತಿಷ್ಠಿತ ನಮ್ಮ ಸಂಘದ ಉಪಾಧ್ಯಕ್ಷರಾಗಿ ಅವಿರೋಧವಾಗಿ ತಾರಾನಾಥ ಕಂಪರವರು ಆಯ್ಕೆಯಾಗಿರುವುದು ನನಗೆ ಖುಷಿ ತಂದಿದೆ. ಯುವಕರು ಇಂತಹ ಸಂಘಗಳ ಚುಕ್ಕಾಣಿ ಹಿಡಿದಾಗ ಸಂಘದ ಅಭಿವೃದ್ಧಿ ಇನ್ನಷ್ಟು ಗಟ್ಟಿಯಾಗುತ್ತದೆ. ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇದೆ. ಸಂಘದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈ ಜೋಡಿಸಿ ಸೇವೆ ಸಲ್ಲಿಸೋಣ ಎಂದು ಹೇಳಿ ಶುಭ ಹಾರೈಸಿದರು.ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ, ಸಂಘದ ನಿರ್ದೇಶಕ ಸಂತೋಷ್ ಕುಮಾರ್ ರೈ ಕೋರಂಗರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ನಿರ್ದೇಶಕರುಗಳಾದ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಎಸ್.ಬಿ.ಜಯರಾಮ ರೈ ಬಳಜ್ಜ, ಜನಾರ್ದನ ರೈ ಕೊಡಂಕೀರಿ, ರಿತೇಶ್ ಮೇರ್ಲ, ಸೀತಾರಾಮ ಗೌಡ ಇದ್ಯಪೆ, ಪುಷ್ಪಲತಾ ಜೆ ರೈ ತಿಂಗಳಾಡಿ, ಜಯಂತಿ, ಲೋಕೇಶ್ ಬೋಳೋಡಿ, ಪ್ರವೀಣ ಕಣಿಯಾರು, ಸಂತೋಷ್ ಕುಮಾರ್ ರೈ ಕೋರಂಗ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸೂರಜ್ ಕುಮಾರ್ ಕೆ, ಶಾಖಾ ವ್ಯವಸ್ಥಾಪಕರಾದ ನಿರುಪಮ, ಸಿಬ್ಬಂದಿಗಳಾದ ಪ್ರೀತಮ್ ಬಿ.ರೈ, ಕೌಶಲ್ಯ ಎಂ, ಭವ್ಯಶ್ರೀ, ದುರ್ಗಾಕಿರಣ್, ಐತ್ತಪ್ಪ ನಾಯ್ಕ, ಅಣ್ಣು ತಿಂಗಳಾಡಿ, ಪ್ರದೀಪ್, ಚರಣ್ರಾಜ್, ಕೊರಗಪ್ಪ ತಿಂಗಳಾಡಿ, ಸುಜಾತ ಮುಳಿಗದ್ದೆ ಉಪಸ್ಥಿತರಿದ್ದರು.



ಹೂ ಹಾರ ಹಾಕಿ ಅಭಿನಂದನೆ ಸಲ್ಲಿಕೆ
ಉಪಾಧ್ಯಕ್ಷರಾಗಿ ಆಯ್ಕೆಯಾದ ಯುವ ಮುಂದಾಳು ತಾರಾನಾಥ ಕಂಪರವರನ್ನು ಈ ಸಂದರ್ಭದಲ್ಲಿ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಿರ್ದೇಶಕರುಗಳು ಹೂ ಹಾರ ಹಾಕಿ ಅಭಿನಂದಿಸಿದರು. ಇದಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಹೂ ಹಾರ ಅಭಿನಂದಿಸಿದರು. ಕೆಯ್ಯೂರು ಗ್ರಾಪಂ ಮಾಜಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಶರತ್ ರೈ ದೇರ್ಲ, ಶರತ್ ಗೌಡ ಗುತ್ತು, ಪ್ರಮೀತ್ರಾಜ್ ಕಟ್ಟತ್ತಾರು, ಜಯರಾಮ ರೈ ಮಿತ್ರಂಪಾಡಿ, ಲೋಹಿತಾಕ್ಷ ಮಾಡಾವು, ನೇಮಿರಾಜ್ ರೈ ಕುರಿಕ್ಕಾರ ಸೇರಿದಂತೆ ಹಲವು ಮಂದಿ ಆಗಮಿಸಿ ಅಭಿನಂದಿಸಿದರು.
ತಾರಾನಾಥ ಕಂಪ ಪರಿಚಯ
ತಾರಾನಾಥ ಕಂಪರವರು ಕೆಯ್ಯೂರು ಗ್ರಾಮದ ಕಂಪ ನಿವಾಸಿ ನಾಟಿ ವೈದ್ಯರಾದ ಕಂಪ ರಾಮಣ್ಣ ಪೂಜಾರಿ ಮತ್ತು ಗುಲಾಬಿರವರ ಪುತ್ರರಾಗಿದ್ದಾರೆ. ಇವರು ಭಜರಂಗದಳದ ತಾಲೂಕು ಸಹ ಸಂಚಾಲಕರಾಗಿ, ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ, ಭಾರತೀಯ ಜನತಾ ಪಾರ್ಟಿ ಕೆಯ್ಯೂರು ಶಕ್ತಿಕೇಂದ್ರದ ಕಾರ್ಯದರ್ಶಿಯಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
……
“ಸಂಘದ ಆಡಳಿತ ಮಂಡಳಿಯ ಸರ್ವ ನಿರ್ದೇಶಕರುಗಳ ಒಪ್ಪಿಗೆಯಂತೆ ಸಂಘದ ಉಪಾಧ್ಯಕ್ಷರಾಗಿ ಸಂಘದ ಯುವ ನಿರ್ದೇಶಕರಾದ ತಾರಾನಾಥ ಕಂಪರವರು ಆಯ್ಕೆಯಾಗಿದ್ದಾರೆ. ಸಂಘದ ಸರ್ವರು ಅತ್ಯಂತ ಪ್ರೀತಿಯಿಂದ ಅವಿರೋಧವಾಗಿ ಇವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆ ಸೇರಿದಂತೆ ಸಂಘದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಾವೆಲ್ಲರೂ ಸೇರಿ ದುಡಿಯಬೇಕಾಗಿದೆ. ನೂತನ ಉಪಾಧ್ಯಕ್ಷರಿಗೆ, ಆಡಳಿತ ಮಂಡಳಿಗೆ ಹಾಗೇ ಚುನಾವಣಾ ಅಧಿಕಾರಿಯವರಿಗೆ, ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.” ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಅಧ್ಯಕ್ಷರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.
“ ಪ್ರತಿಷ್ಠಿತ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ನನಗೆ ಬಹಳಷ್ಟು ಖುಷಿ ತಂದಿದೆ. ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷರಿಗೆ ಹಾಗೇ ಎಲ್ಲಾ ನಿರ್ದೇಶಕರು ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ.” ತಾರಾನಾಥ ಕಂಪ, ಉಪಾಧ್ಯಕ್ಷರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ













