







ಪುತ್ತೂರು : ಬೆಟ್ಟoಪಾಡಿ ಗ್ರಾಮದ ಪಾರ ನಿವಾಸಿ, ರಿಕ್ಷಾ ಚಾಲಕರಾಗಿದ್ದ ಸುಂದರ ಗೌಡ(64 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ. 10ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ತಾಯಿ ಗಿರಿಜ, ಪತ್ನಿ ಗೀತಾ, ಪುತ್ರರಾದ ಮುರಳಿ, ಪ್ರಸನ್ನ, ಪುತ್ರಿ ಕೀರ್ತಿಕಾ ಹಾಗೂ ಸಹೋದರರಾದ ಕುಶಾಲಪ್ಪ ಗೌಡ, ಪದ್ಮನಾಭ ಗೌಡ, ಕೊರಗಪ್ಪ ಗೌಡ, ಶೇಷಪ್ಪ ಗೌಡರವರನ್ನು ಅಗಲಿದ್ದಾರೆ.













