







ಪುತ್ತೂರು: ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್, ಮರೀಲ್ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ರಿಕ್ರಿಯೇಷನ್ ಸೆಂಟರ್‌ನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.


ಜನ್ಮಾಷ್ಟಮಿ ಪ್ರಯುಕ್ತ ಬೆಳಿಗ್ಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯ ವಿಸಿಟಿಂಗ್ ಡಾಕ್ಟರ್ ಡಾ. ರಮ್ಯಾ ಹಾಗೂ ಪಂಜಿಕಲ್ಲು ಶ್ರೀ ವಿಷ್ಣುಮೂರ್ತಿ ಅನುದಾನಿತ ಹೈಯರ್ ಪ್ರೈಮರಿ ಶಾಲೆಯ ನಿವೃತ್ತ ಶಿಕ್ಷಕಿ ಚಂದ್ರಿಕಾ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಮಧ್ಯಾಹ್ನ ನಡೆದ ಕಾರ್ಯಕ್ರಮವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಸಹಶಿಕ್ಷಕಿ ವೀಣಾ ಕುಮಾರಿ ಹಾಗೂ ತಾಲೂಕು ಆಡಳಿತ ಕಚೇರಿ ಪುತ್ತೂರಿನ ಅಳಿಕೆ ಗ್ರಾಮಾಧಿಕಾರಿ ಶ್ರೀಕಲಾ ಕಾರಂತ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಕ್ಯಾಂಪ್ಕೊ ಕುಟುಂಬದ ಮಕ್ಕಳಿಂದ ಹಿಡಿದು ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಎಲ್‌ಕೆಜಿ ಮಕ್ಕಳಿಗೆ ಮುದ್ದುಕೃಷ್ಣ-ಮುದ್ದುರಾಧೆ ವೇಷ, ಅದೃಷ್ಟ ಪರೀಕ್ಷೆ ಹಾಗೂ ಚಾಕೊಲೇಟ್ ಹೆಕ್ಕುವ ಸಹಿತ ಸಣ್ಣ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.



ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಂಗೋಲಿ ಸ್ಪರ್ಧೆಯ ತೀರ್ಪುಗಾರರಾದ ಡಾ. ರಮ್ಯಾ ಅವರನ್ನು ಬಿಂದು ಪ್ರಶಾಂತ್ ಹಾಗೂ ನಿವೃತ್ತ ಶಿಕ್ಷಕಿ ಚಂದ್ರಿಕಾ ಅವರನ್ನು ಸುಲತಾ ಸತೀಶ್ ಗೌರವಿಸಿದರು. ಮುಖ್ಯ ಅತಿಥಿಗಳಾದ ಶ್ರೀಕಲಾ ಕಾರಂತ್ ಅವರನ್ನು ಪಾವನಾ ಜಗದೀಶ್ ಹಾಗೂ ವೀಣಾ ಕುಮಾರಿ ಅವರನ್ನು ವನಿತಾ ಗೌರವಿಸಿದರು. ವೇದಿಕೆಯಲ್ಲಿ ರಿಕ್ರಿಯೇಷನ್ ಸೆಂಟರ್ ಅಧ್ಯಕ್ಷ ಈಶ್ವರ್ ನಾಯ್ಕ್, ಉಪಾಧ್ಯಕ್ಷೆ ಸುಲತಾ ಸತೀಶ್, ಕಾರ್ಯದರ್ಶಿ ರಮೇಶ ನೆಗಳಗುಳಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಚಿಪ್ಪಾರ್ ಉಪಸ್ಥಿತರಿದ್ದರು. ಕುಮಾರಿ ವಿಧಿತಾ ಭಟ್ ಪ್ರಾರ್ಥಿಸಿದರು. ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ವರುಣ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಸುಲತಾ ಸತೀಶ್ ವಂದಿಸಿದರು.










