ಪಿಡಬ್ಲ್ಯೂಡಿ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕೆ ಅವರಿಗೆ ಪಿತೃ ವಿಯೋಗ

0

ಪುತ್ತೂರು: ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಇಂಜನಿಯರ್ ಪ್ರಮೋದ್ ಕುಮಾರ್ ಕೆ ಅವರ ತಂದೆ ಕುಂಞಣ್ಣ ಗೌಡ (82ವ)ರವರು ಸೆ.11ರಂದು ಬೆಳಗ್ಗೆ ನಿಧನರಾದರು.


ಕೂಟೇಲು ಕುಟುಂಬದವರಾಗಿರುವ ಕುಂಞಣ್ಣ ಗೌಡ ಅವರು ಕೊಂಬಾರು ಗ್ರಾಮದ ಮಣಿಭಾಂಡದಲ್ಲಿ ವಾಸ್ತವ್ಯ ಹೊಂದಿದ್ದು ಮಗ ಪ್ರಮೋದ್ ಕುಮಾರ್ ಅವರ ಪುತ್ತೂರಿನ ನೆಹರುನಗರ ಮನೆಯಲ್ಲಿದ್ದರು. ಇತ್ತೀಚೆಗೆ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಪತ್ನಿ ನಿವೃತ್ತ ಮುಖ್ಯಗುರು ಜಾನಕಿ, ಪುತ್ರ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮೋದ್ ಕುಮಾರ್ ಕೆ, ಪುತ್ರಿಯರಾದ ಭಾಗ್ಯಶ್ರೀ, ನಮಿತಾ, ಜ್ಯೋತಿ ಅವರನ್ನು ಅಗಲಿದ್ದಾರೆ.


ಶಿರಾಡಿ ಮಂಡಲ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಕುಂಞಣ್ಣ ಗೌಡ :
ಮೂಲತಃ ಪಂಜ ಕೂತ್ಕುಂಜದಲ್ಲಿ ಹುಟ್ಟಿ ಬೆಳೆದ ಕೂಟೇಲು ಕುಟುಂಬದ ಕುಂಞಣ್ಣ ಗೌಡ ಅವರು ಬಳಿಕ ಕೊಂಬಾರು ಗ್ರಾಮದ ಮಣಿಭಾಂಡದಲ್ಲಿ ಕೃಷಿ ಚಟುವಟಿಕೆ ನಡೆಸಿದರು. ಇದೇ ಸಂದರ್ಭ ಅವರು ಶಿರಾಡಿ ಮಂಡಲಪಂಚಾಯತ್ ಸದಸ್ಯರಾಗಿ ಸಮಾಜ ಸೇವೆಗೆ ಮುಂದಾದರು. ಒಕ್ಕಲಿಗ ಗೌಡ ಸಂಘ, ಸಹಕಾರಿ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು ಜನಾನುರಾಯಿಗಿದ್ದರು.

ಇಂದು(ಸೆ.11) ಬೆಳಿಗ್ಗೆ ಪುತ್ತೂರು ಮನೆಯಲ್ಲಿ ಅಂತಿಮ ದರ್ಶನ
ಕುಂಞಣ್ಣ ಗೌಡರ ಅಂತಿಮ ವಿಧಿವಿಧಾನವನ್ನು ಕೊಂಬಾರು ಗ್ರಾಮದ ಮಣಿಭಾಂಡದಲ್ಲಿ ನಡೆಸಲಾಗುವುದು. ಅದಕ್ಕೂ ಮೊದಲು ಬೆಳಿಗ್ಗೆ ಪುತ್ತೂರು ನೆಹರುನಗರದಲ್ಲಿರುವ ಮಗ ಪ್ರಮೋದ್ ಕುಮಾರ್ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬಳಿಕ ಕುಂಞಣ್ಣ ಗೌಡ ಅವರ ಪಾರ್ಥಿವ ಶರೀರವನ್ನು ಮಣಿಭಾಂಡಕ್ಕೆ ಕೊಂಡೊಯ್ಯಲಾಗುವುದು ಎಂದು ಪ್ರಮೋದ್ ಕುಮಾರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here