






ಪುತ್ತೂರು: ಬೆಳ್ಳಿಹಬ್ಬದ ಸಂಭ್ರಮವನ್ನು ಕಾಣುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ.13 ರಂದು ಪೂರ್ವಾಹ್ನ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಲಿದೆ.


ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ವ್ಯವಹರಿಸುತ್ತಿದ್ದು ಮಹಾಸಭೆಯು ಸೊಸೈಟಿ ಅಧ್ಯಕ್ಷ ರಾಕೇಶ್ ಜೆ.ಮಸ್ಕರೇನ್ಹಸ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿಗೊಳ್ಳಲಿರುವ ಸೊಸೈಟಿ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾರವರನ್ನು ಸನ್ಮಾನಿಸುವ ಕಾರ್ಯಕ್ರಮ ನೆರವೇರಲಿದೆ.



ಸೊಸೈಟಿ ಉಪಾಧ್ಯಕ್ಷ ಸುನಿಲ್ ಶೈಲೇಶ್ ಮಸ್ಕರೇನ್ಹಸ್, ನಿರ್ದೇಶಕರುಗಳಾದ ರೋಯಿಸ್ಟನ್ ಡಾಯಸ್, ಪವನ್ ಜೋನ್ ಮಸ್ಕರೇನ್ಹಸ್, ವಿಜಯ್ ವಿಲ್ಫ್ರೆಡ್ ಡಿ’ಸೋಜ, ಲೆಸ್ಟರ್ ಪಿಂಟೊ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಮೌರಿಸ್ ಮಸ್ಕರೇನ್ಹಸ್, ಶ್ರೀಮತಿ ಹಿಲ್ಡಾ ಮಿನೇಜಸ್, ಶ್ರೀಮತಿ ಶೈನಿ ಎನ್.ಎಸ್ ರವರು ಭಾಗವಹಿಸಲಿದ್ದಾರೆ. ಸೊಸೈಟಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕು ಎಂದು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಭಾರ ಕಾರ್ಯದರ್ಶಿ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










