ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಆರಂಭ 

0

ಬಡಗನ್ನೂರು : ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿ ಇವರ ಮಾರ್ಗದರ್ಶನದಲ್ಲಿ ಅ.11 ರಂದು ಪ್ರಾರಂಭಗೊಂಡು 19 ತನಕ ಶ್ರೀ ಸನ್ನಿಧಿಯಲ್ಲಿ ನಡೆಯಲಿದ್ದು ಆ ಪ್ರಯುಕ್ತ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ  ಮೇರವಣಿಗೆಗರ ಚಾಲನೆ ನಡೆಯಿತು.

ಪುತ್ತೂರು ಮಾತೃ ಸಂಸ್ಥೆ  ದ್ವಾರಕ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಹಾಗೂ  ಡಾ. ಮೋಹನ್ ದಾಸ್ ಕೊಡಿಂಕಿರಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. 

ವಿಜೃಂಭಣೆಯ ಮೇರವಣಿಗೆ 
ಪುಟಾಣಿ ಮಕ್ಕಳು ನವದುರ್ಗೆ ವೇಷಧಾರಿಗಳಾಗಿ ರಥದಲ್ಲಿ ,ಭಜನೆ, ಕಣಿತ ಭಜನೆ  ಸಿಂಗರಿಮೇಳ ಹುಲಿ ಕರಡಿ ಸಿಂಹ ಕುಣಿತ  ವಾದ್ಯ ಘೋಷಗಳೊಂದಿಗೆ ಪಡುಮಲೆ ಶ್ರೀ ಕೂವೆ ಶಾಸ್ತಾರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಮದಕ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ತೆರಳಲಾಯಿತು. ತದನಂತರ ಶ್ರೀ ಕ್ಷೇತ್ರದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಸಂಘ ಪಡುಮಲೆ ಹಾಗೂ ಮಹಾಮ್ಮಯಿ ಮಹಿಳಾ ಭಜನಾ ಸಂಘ ಪಟ್ಟೆ ಇದರ ಸದಸ್ಯರಿಂದ ಭಜನೆ ಹಾಗೂ ವೖೆಧಿಕ ತಂಡದವರಿಂದ ಸಹಸ್ರನಾಮಾದಿ ಪಾರಾಯಣ ನಡೆಯಿತು. ಬಳಿಕ ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜಾ ಪ್ರಸಾದ ವಿತರಣೆ ನಡೆಯಿತು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ  ಪಡುಮಲೆ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಶ್ರೀ ಕ್ಷೇತ್ರ  ವ್ಯವಸ್ಥಾಪನಾ ಸಮಿತಿ  ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ ಪುರಂದರ ರೖೆ ಕುದ್ಕಾಡಿ, , ಶಂಕರಿ ಪಟ್ಟೆ ಶ್ರೀಮತಿ ಕನ್ನಡ್ಕ  ಗ್ರಾ. ಪಂ ಮಾಜಿ  ಸದಸ್ಯರಾದ ಸಂತೋಷ ಆಳ್ವ ಗಿರಿಮನೆ,  ಲಿಂಗಪ್ಪ ಗೌಡ ಮೋಡಿಕೆ  ಸುಜಾತಾ ಮೖೆಂದನಡ್ಕ, ಶರನ್ನವರಾತ್ರಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶೀಧರ ನಾಯ್ಕ ನೇರ್ಲಂಪ್ಪಾಡಿ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಗಂಗಾಧರ ರೖೆ ಮೇಗಿನಮನೆ  ಅಧ್ಯಕ್ಷ ರಾಜೇಶ್ ರೖೆ ಮೇಗಿನಮನೆ  ಸದಸ್ಯರಾದ ಸುರೇಶ್ ರೖೆ ಪಳ್ಳತ್ತಾರು, ಮಸೋಹರ ರೖೆ ಮೇಗಿನಮನೆ, ಚಂದ್ರಶೇಖರ ಭಂಡಾರಿ ಕೇಶವ ಭಟ್ ಪಾದೆಕರ್ಯ  ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ  ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.  

LEAVE A REPLY

Please enter your comment!
Please enter your name here