ಪುತ್ತೂರು: 2022 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಶೇಕಡಾ 85 ಫಲಿತಾಂಶ ದಾಖಲಿಸಿದೆ. ಕಾಲೇಜಿನಿಂದ 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ಕು. ಫಾತಿಮತ್ ರಾಫಿಯಾ 578 ಅಂಕಗಳೊಂದಿಗೆ (ಶೇ96. 3) ಪ್ರಥಮ ಸ್ಥಾನಿಯಾಗಿದ್ದಾರೆ, ಇವರು ಅರ್ಲಪದವಿನ ಯೂಸೂಫ್ ಇವರ ಪುತ್ರಿಯಾಗಿದ್ದಾರೆ . ವಾಣಿಜ್ಯ ವಿಭಾಗದ ಕು. ಕೆ. ಅಫ್ರಾ 569 ಅಂಕಗಳೊಂದಿಗೆ ದ್ವಿತೀಯ ಸ್ಥಾನ , ಇವರು ಪೆರಲ್ತಡ್ಕದ ಕೆ. ಇಬ್ರಾಹಿಂ ಇವರ ಪುತ್ರಿಯಾಗಿದ್ದಾರೆ. ವಾಣಿಜ್ಯ ವಿಭಾಗದ ಕು. ಫಾತಿಮತ್ ಶಂಶೀರಾ 568 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ, ಇವರು ಅರ್ಲಪದವಿನ ಹಾಜಿ ಅಬೂಬಕ್ಕರ್ ಇವರ ಪುತ್ರಿಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕು.ಸಾರಮೀನ 532 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶ್ವೇತಾ ಬಿ. 528 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದ ಧನ್ಯಶ್ರೀ ವಿ.(543), ಜೆಸ್ಮಿ ಎಚ್.ಕೆ. (530), ಮಹಮ್ಮದ್ ಸಫ್ವಾನ್ (516), ಕಲಾ ವಿಭಾಗದ ವರ್ಣಿತಾ ಕೆ.(524) ಮತ್ತು ಫಾತಿಮಾತ್ ಅಫ್ರಾ (512) ಅಂಕಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಗೋಪಾಲ ಗೌಡ ತಿಳಿಸಿದ್ದಾರೆ.