








ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಹಿತ್ಲುಮೂಲೆ ದಿ.ಬಾಬು ರೈಯವರ ಪತ್ನಿ ಶ್ರೀಮತಿ ಭವಾನಿ ರೈ (80ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.07 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿಯರಾದ ಕಸ್ತೂರಿ ರೈ, ಪ್ರೇಮಲತಾ, ಹೇಮಾಲತಾ, ಪುತ್ರರಾದ ಜಗನ್ನಾಥ ರೈ ಮತ್ತು ಸತೀಶ್ ರೈ ಕರ್ನೂರು ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.













