ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದುಕೊಂಡು ಹಿಂದೂ ಭಾವನೆಗೆ ಧಕ್ಕೆ ತರುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿರವರನ್ನು ಬಂಧಿಸಬೇಕೆಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್- ಬಜರಂಗ ದಳ ಹಾಗೂ ಭಜನಾ ಪರಿಷತ್ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾಸ್ಕರ್ ಧರ್ಮಸ್ಥಳ, ಸರಕಾರಿ ನೌಕರನಾಗಿದ್ದುಕೊಂಡು ಸಮಾಜದ ಶಾಂತಿ ಕೆಡಿಸುವ ಕೃತ್ಯವೆಸಗುತ್ತಿರುವ ಸಂಜೀವ ಪೂಜಾರಿ ಕಾಣಿಯೂರುರವರ ವಿರುದ್ದ ಕ್ರಮ ಜರುಗಿಸದೇ ಹೋದರೆ ಸಂಭಾವ್ಯ ಹೋರಾಟಗಳಿಗೆ ಪೊಲೀಸ್ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಪ್ರಮುಖರಾದ ಸುದರ್ಶನ್, ಯು. ರಾಮ, ಮಹೇಶ್ ಬಜತ್ತೂರು, ಮೂಲಚಂದ್ರ ಕಾಂಚನ, ರವೀಂದ್ರ ಆಚಾರ್ಯ, ರವಿನಂದನ್ ಹೆಗ್ಡೆ, ರಾಧಾಕೃಷ್ಣ ಬೊಳ್ಳಾವು, ಜಯಂತ್ ಅಂಬರ್ಜೆ , ಪ್ರಶಾಂತ್ ಶಿವಾಜಿ ನಗರ, ಸದಾನಂದ ನೆಕ್ಕಿಲಾಡಿ, ಜ್ಯೋತಿ ಹೇರಂಬ ಶಾಸ್ತ್ರಿ, ಜಯಶ್ರೀ ಜನಾರ್ಧನ್, ಪುಷ್ಪಲತಾ, ಉಷಾ ಮುಳಿಯ, ಕಿಶನ್ ಕಾಂಚನ, ಕಿಶೋರ್ ನೀರಕಟ್ಟೆ ಮತ್ತಿತರರು ಭಾಗವಹಿಸಿದ್ದರು.