ಪುತ್ತೂರು: ಕೊಂಬೆಟ್ಟಿನಲ್ಲಿರುವ ಶ್ರೀ ವ್ಯಾಘ್ರ ಚಾಮುಂಡೀ ದೈವಸ್ಥಾನ(ಪಿಲಿಭೂತ) ಇದರ ವಾರ್ಷಿಕ ಕಲಶಾಭಿಷೇಕ, ತಂಬಿಲ ಹಾಗೂ ದೈವದ ನರ್ತನ ಸೇವೆಯು ಜ.25 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಜ.5ರಂದು ದೈವಸ್ಥಾನದ ನಡೆಯಲ್ಲಿ ನಡೆಯಿತು. ದೈವಸ್ಥಾನದ ಅಧ್ಯಕ್ಷ ಕೃಷ್ಣಪ್ರಸಾದ ಕೆದಿಲಾಯ ಶಿಬಿರ ಅವರು ದೈದ ನಡೆಯಲ್ಲಿ ಆಮಂತ್ರಣ ಪತ್ರ ವಿಟ್ಟು ಪ್ರಾರ್ಥಿಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಅವರು ಮಾತನಾಡಿ ದೇವಳದ ಪಿಲಿಭೂತಕ್ಕೂ ಇಲ್ಲಿನ ಪಿಲಿಭೂತಕ್ಕೂ ಸಂಬಂಧವಿದೆ ಎಂದು ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ದೈವಜ್ಞರು ನುಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶೇಷ ಕಾರ್ಣಿಕ ಶಕ್ತಿಯಾಗಿರುವ ಪಿಲಿಭೂತ ದೈವದ ನರ್ತನ ಸೇವೆಯನ್ನು ಭಕ್ತರು ನೋಡಿ ಮನಸ್ಸಿನ ಇಚ್ಚೆಯನ್ನು ದೈವ ಈಡೇರಿಸುವಂತಾಗಲಿ ಎಂದರು.
ಪರಿಸರಕ್ಕೆ ಆಮಂತ್ರಣ ಪತ್ರ ವಿತರಣೆ:
ದೈವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು ಅವರು ಮಾತನಾಡಿ ಮುಂದೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ದೈವಸ್ಥಾನದ ಅಕ್ಕಪಕ್ಕದಲ್ಲಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ವಿದ್ಯಾರ್ಥಿಗಳು ಪರಿಸರದ ನಾಗರಿಕರಿಗೆ ಕೊಡುವ ಕಾರ್ಯ ಮಾಡಬೇಕು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ, ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಪ್ರಕಾಶ್ ಪೈ, ಕೊಟ್ಟಿಬೆಟ್ಟು ಏಳ್ನಾಗುತ್ತುವಿನ ರತ್ನಾಕರ್ ನಾಕ್, ಜಯರಾಮ, ಐತ್ತಪ್ಪ, ಭಾಸ್ಕರ್ ಉಪಸ್ಥಿತರಿದ್ದರು.