ಚಿತ್ರ: ಕೃಷ್ಣಾ ಪುತ್ತೂರು
ಪುತ್ತೂರು: ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಹಾಗೂ ಚಾರ್ವಾಕ ಕಾಪಿನಕಾಡು ಕುಮಾರಧಾರಾ ಫಾರ್ಮ್ಸ್‌ನ ವಿಜಯಕುಮಾರ್ ಸೊರಕೆ ಹಾಗೂ ಶ್ರೀಮತಿ ಸುಕೃಪಾ ದಂಪತಿ ಚಾರ್ವಾಕ ಗ್ರಾಮದ ಕಾಪಿನಕಾಡು ಕುಮಾರಧಾರಾ ಫಾರ್ಮ್ಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಗೃಹ ವಿಜಯಲಕ್ಷ್ಮೀ ಮ್ಯಾನ್ಶನ್ ಇದರ ಪ್ರವೇಶೋತ್ಸವವು ಫೆ.9ರಂದು ಜರಗಿತು.
ಅರ್ಚಕರಾದ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನೂತನ ಗೃಹದ ಪ್ರವೇಶೋತ್ಸವ ಪ್ರಯುಕ್ತ ಫೆ.8 ರಂದು ಸಂಜೆ ದೇವತಾ ಪ್ರಾರ್ಥನೆ, ಆಚರ್ಯವರಣ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಇಂದ್ರಾದಿ ದಿಕ್ಪಾಲಕ ಬಲಿ, ಪ್ರಸಾದ ವಿತರಣೆ, ಫೆ.9 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ತುಳಸೀ ಪ್ರತಿಷ್ಠೆ, ದ್ವಾರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ನೆರವೇರಲ್ಪಟ್ಟಿತು.
ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಮಾಜಿ ವಿಟ್ಲ ಶಾಸಕ ರುಕ್ಮಯ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹಾಗೂ ಸದಸ್ಯ ಶೇಖರ್ ನಾರಾವಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಕಡಬ ತಾಲೂಕು ಪಂಚಾಯತ್ ಸದಸ್ಯ ಆಶಾ ಲಕ್ಷ್ಮಣ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿ, ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಷಾ ಅಂಚನ್, ಸಂಪ್ಯ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪುತ್ತೂರು ಬಿಲ್ಲ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಡಿಸಿಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ್, ಕಾಂಗ್ರೆಸ್ ಮುಖಂಡ ತೋಮಸ್ ನೆಲ್ಯಾಡಿ, ಉದ್ಯಮಿಗಳಾದ ಶಿವರಾಂ ಆಳ್ವ, ಉಮೇಶ್ ನಾಡಾಜೆ, ಶ್ರೀಧರ ಪಟ್ಲ, ನರಿಮೊಗರು ಸುವರ್ಣ ಎಸ್ಟೇಟ್‌ನ ವೇದನಾತ ಸುವರ್ಣ, ಅಣ್ಣಿ ಪೂಜಾರಿ ಹಿಂದಾರು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪಿ.ಶೇಷಪ್ಪ ಬಂಗೇರ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಹರೀಶ್ ಕುಮಾರ್ ಪರ್ಲಡ್ಕ, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ನಿಯಮಿತ ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಹಿತ ಸುಮಾರು ೩೦೦೦ಕ್ಕೂ ಮಿಕ್ಕಿ ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ವಿಜಯಕುಮಾರ್ ದಂಪತಿಗೆ ಶುಭ ಹಾರೈಸಿದ್ದಾರೆ.
ನೂತನ ಗೃಹ ವಿಜಯಲಕ್ಷ್ಮೀ ಮ್ಯಾನ್ಶನ್ ಮಾಲಕ ಕುಮಾರಧಾರಾ ಫಾರ್ಮ್ಸ್‌ನ ವಿಜಯಕುಮಾರ್ ಸೊರಕೆ ಹಾಗೂ ಶ್ರೀಮತಿ ಸುಕೃಪಾ ದಂಪತಿ, ಪುತ್ರಿ ಡಾ|ನಿಧಿಕಾ ವಿ.ಸೊರಕೆ, ಪುತ್ರ ಸಿಎ ತೇಜಸ್ ವಿ.ಸೊರಕೆಯವರು ಆಗಮಿಸಿದ ಬಂಧುಮಿತ್ರರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಚಾರ್ವಾಕದ ಚೆಂಡೆ ವಾದನ ಗಮನ ಸೆಳೆಯಿತು.