ಪುತ್ತೂರು: ಪ್ರಯಾಣಿಕರ ಸಮಯದ ಉಳಿತಾಯ, ರೈಲ್ವೆ ಇಲಾಖೆಗೆ ಇಂಧನದ ವೆಚ್ಚ ಕಡಿತದಂಥಹ ಕ್ರಮಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ ಮಂಗಳೂರು ,ಹಾಸನ ತನಕದ ಮಧ್ಯೆ ಕಬಕ ಪುತ್ತೂರು ನಿಲ್ದಾಣದ ತನಕದ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಪುತ್ತೂರಿನಿಂದ ವಿದ್ಯುತ್ ಚಾಲಿತ ಇಂಜಿನ್ ಗೆ ಪ್ರಾಯೋಗಿಕ ಚಾಲನೆ ನೀಡಲಾಯಿತು.
ಸೌತ್ ವೆಸ್ಟರ್ನ್ ರೈಲ್ವೆ ಯ ಪ್ರಿನ್ಸಿಪಾಲ್ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ್ ಸಿಂಗ್ ಅವರು ಪ್ರಾಯೋಗಿಕ ಇಂಜಿನ್ ಗೆ ಚಾಲನೆ ನೀಡಿದರು.
ಈ ಸಂದರ್ಭ ಕಬಕ ಪುತ್ತೂರು ರೈಲ್ವೇ ಸ್ಟೇಷನ್ ನ ಸಹಾಯ ಅಧಿಕಾರಿ ಲಸ್ಸಿತಾ, ರೈಲ್ವೇ ಮೈಸೂರು ವಿಭಾಗೀಯ ಟಿಕೇಟ್ ಚೆಕ್ಕಿಂಗ್ ಇನ್ ಸ್ಪೆಕ್ಟರ್ ವಿಠಲ್ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.