ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲು ಸಂತೃಪ್ತ ಗ್ರಾಹಕರೇ ಕಾರಣ – ಸಂತೋಷ್ ಕುಮಾರ್ ಎ.
ಉತ್ತಮ ಸೇವೆಯ ಮೂಲಕ ಜನರ ಮನಸ್ಸು ಗೆದ್ದು ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡ ಸಂಸ್ಥೆ – ಕೆ. ಸಿ ನಾೖಕ್
ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಮೂಲ್ಯವಾಗಿದೆ – ಶೈಲೇಶ್ ಶೆಟ್ಟಿ
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೇರೆ ಬೇರೆ ತರದ ಉದ್ಯಮವನ್ನು ಮಾಡಿ ಜನಸ್ನೇಹಿಯಾಗಿ ಸೊಸೈಟಿ ಮುನ್ನಡೆಯಲಿ – ಭರತ್ ಕುಮಾರ್
ಪುತ್ತೂರು: ಮಂಗಳೂರಿನ ಹಂಪನಕಟ್ಟೆ ಯಲ್ಲಿರುವ ನಲಪ್ಪಾಡ್ ಅಪ್ಸರ ಛೇಂಬರ್ಸ್ನಲ್ಲಿ ಕಾರ್ಯನಿರ್ವಸುತ್ತಿದ್ದ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯು ಸ್ಥಳಾಂತರಗೊಂಡು ಎನ್ಫೋರ್ಸ್ ಲೇಜೋರಿನ್ ಕಾಂಪ್ಲೆಕ್ಸ್, ನಂದಿಗುಡ್ಡೆ ಬಸ್ ನಿಲ್ದಾಣದ ಹತ್ತಿರ, ಮಂಗಳೂರಿನಲ್ಲಿ ಆ.28ರಂದು ಶುಭಾರಂಭಗೊಂಡಿತು.
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ ಇದರ ಆಡಳಿತ ಮುಕ್ತೇಸರ ಕೆ.ಸಿ.ನಾೖಕ್ರವರು ಸಂಸ್ಥೆಯನ್ನು ಉದ್ಘಾಟಿಸಿದರು. ಪುತ್ತೂರಿನಲ್ಲಿ ಆರಂಭವಾದ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ವಿವಿಧ ಕಡೆಗಳಲ್ಲಿ 5 ಶಾಖೆಗಳೊಂದಿಗೆ ವಿಸ್ತಾರಗೊಂಡು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಉತ್ತಮ ಸೇವೆಯ ಮೂಲಕ ಜನರ ಮನಸ್ಸು ಗೆದ್ದು ಹಂತ ಹಂತವಾಗಿ ಬೆಳವಣಿಗೆಯನ್ನು ಕಂಡ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ 59 ಅತ್ತಾವರ ವಾರ್ಡ್ನ ಕಾರ್ಪೋರೇಟರ್ ಶೈಲೇಶ್ ಶೆಟ್ಟಿ ಮಾತನಾಡಿ ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಮುಲ್ಯವಾಗಿದೆ. ಜನರ ಸ್ವಾವಲಂಬಿ ಬದುಕಿಗೆ ಕೋ-ಓಪರೇಟಿವ್ ಸೊಸೈಟಿಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪರಿವಾರ ಸೊಸೈಟಿಯು ಇನ್ನು ಹೆಚ್ಚಿನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಅನುಕೂಲವನ್ನು ಕಲ್ಪಿಸಲಿ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ 59 ಜೆಪ್ಪುಬಪ್ಪಲ್ ವಾರ್ಡ್ನ ಕಾರ್ಪೋರೇಟರ್ ಭರತ್ ಕುಮಾರ್ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ಗಳ ಜೊತೆ ಸ್ಪರ್ಧಿಸಿ ಬೆಳೆಯಬೇಕಾಗಿದೆ ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೇರೆ ಬೇರೆ ತರದ ಉದ್ಯಮವನ್ನು ಮಾಡಿ ಜನಸ್ನೇಹಿಯಾಗಿ ಸೊಸೈಟಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. .
ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಛೇರಿಗೆ ಹೆಚ್ಚಿನ ಸ್ಥಳಾವಕಾಶಕ್ಕಾಗಿ ಮಂಗಳೂರಿನ ಶಾಖಾ ಕಛೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಸಂಸ್ಥೆಯು ಹೊಸ ಹೊಸ ಯೋಜನಯನ್ನು ಕಾರ್ಯರೂಪಕ್ಕೆ ತರಲಿದ್ದು ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಿದೆ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲು ಗ್ರಾಹಕರೇ ಕಾರಣ ಎಂದರು.
ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ಸದರಿ ವರ್ಷದಲ್ಲಿ 153.45ಕೋಟಿ ರೂ. ವ್ಯವಹಾರ ನಡೆಸಿ 49.73ಲಕ್ಷ ರೂ ಲಾಭ ಗಳಿಸಿದೆ. ಮಂಗಳೂರು ಶಾಖೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳುವ ಪ್ರಯುಕ್ತ 1 ವರ್ಷ ಹಾಗೂ ಮೇಲ್ಪಟ್ಟು ತೊಡಗಿಸುವ ಠೇವಣಿಗಳಿಗೆ ಶೇ. 9% ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ. 9.5%, ದ್ವಿಚಕ್ರ ಮತ್ತು ಕಾರು ಸಾಲದ ಬಡ್ಡಿ ದರ ಶೇ. 11% ರಂತೆ ನೀಡಲಾಗುವುದು. ಈ ಕೊಡುಗೆಯು ಸೆ.30ರವರೆಗೆ ಮಂಗಳೂರು ಶಾಖೆಯಲ್ಲಿ ಮಾತ್ರ ಲಭ್ಯ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಸಂಸ್ಥೆಯ ನಿರ್ದೇಶಕಿ ಗುಲಾಬಿ ಎಂ. ನಾೖಕ್ ಪ್ರಾರ್ಥಿಸಿದರು. ಸೊಸೈಟಿಯ ಉಪಾಧ್ಯಕ್ಷ ಕೆ. ಶಂಕರ ನಾೖಕ್ ಸ್ವಾಗತಿಸಿದರು, ನಿರ್ದೇಶಕರಾದ ರಘುನಾಥ ನಾೖಕ್, ಕೆ. ರತ್ನಾಕರ್ ನಾೖಕ್, ಸುದೇಶ್ ಕುಮಾರ್ ಕೆ, ಗೋಪಾಲ್ ನಾೖಕ್ ಪಿ., ಟಿ. ಸದಾಶಿವ ನಾೖಕ್, ಸತೀಶ್ ನಾೖಕ್, ರಾಕೇಶ್ ಕುಮಾರ್, ದಿನೇಶ್ ಕುಮಾರ್, ಸ್ಥಳೀಯ ನಿರ್ದೇಶಕ ಕೊಡಂಗೆ ಬಾಲಕೃಷ್ಣ ನಾೖಕ್, ಮಂಗಳೂರು ಶಾಖೆಯ ಶಾಖಾ ವ್ಯವಸ್ಥಾಪಕರಾದ ಜಯಲಕ್ಷ್ಮಿ, ಸಿಬ್ಬಂದಿಗಳಾದ ಕಾರ್ತಿಕ್, ಹರ್ಷಿತ್, ಧೀರಜ್, ನಂದನ್ ಕುಮಾರ್, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ. ಪಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಗ್ರಾಹಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.