16.31ಲಕ್ಷ ನಿವ್ವಳ ಲಾಭ, ಶೇ.10 ಡಿವಿಡೆಂಡ್ – ಘೋಷಣೆ
ಪುತ್ತೂರು: ಸುಮಾರು 63 ವರ್ಷಗಳ ಇತಿಹಾಸ ಇರುವ ಪುತ್ತೂರು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಷ್ಟಕ್ಕೆ ಹೋಗಿ 33 ವರ್ಷಗಳ ಬಳಿಕ ಇದೀಗ ಮತ್ತೆ ಚೇತರಿಗೆಯಾಗಿ 2022-23ನೇ ಸಾಲಿನಲ್ಲಿ ರೂ. 16.31ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಜಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಅವರು ಘೋಷಣೆ ಮಾಡಿದರು.
ಸೆ.23ರಂದು ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಾಜೇಶ್ ಶಾಂತಿನಗರ, ನಿರ್ದೇಶಕರಾದ ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಶೇಖರ ತಾಳ್ತಜೆ, ಎನ್.ಸುಭಾಷ್ ನಾಯಕ್, ಮೊಹಮ್ಮದ್ ಅಶ್ರಫ್ ಕಲ್ಲೇಗ, ಬಿ.ಜಯರಾಮ ರೈ ಬಾಲಾಯ, ಪ್ರದೀಪ್ ರೈ ಮನವಳಿಕೆ, ಪೊಡಿಯ, ನೇತ್ರಾವತಿ ಪಿ.ಗೌಡ, ಸುಜಾತ ರಂಜನ್ ರೈ, ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಸ್.ಬಿ.ಜಯರಾಮ ರೈ, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್ ಬೆಳಿಯಪ್ಪ ಗೌಡ ಉಪಸ್ಥಿತರಿದ್ದರು.