ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಜಂಟಿ ಆಶ್ರಯದಲ್ಲಿ 31ನೇ ವರ್ಷದ ಮಿಲಾದ್ ಸಮಾವೇಶ ಮತ್ತು ವಾಹನ ಜಾಥ ಸೆ.28ರಂದು ಸಂಜೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವರ್ಷಂಪ್ರತಿ ನಡೆಸಿಕೊಂಡು ಬರುವಂತಹ ಫೈಗಂಬರ್ ಮುಹಮ್ಮದ್ ಮುಸ್ತಫಾ (ಸ ಅ) ಅವರ ಜನ್ಮ ದಿನಾಚರಣೆಯಲ್ಲಿ ವಾಹನ ಜಾಥಾ ವಿಶೇಷವಾಗಿದ್ದು, ಸಂಜೆ ಕಬಕ ಪೇಟೆಯಿಂದ ಪುತ್ತೂರು ಕಿಲ್ಲೆ ಮೈದಾನದ ತನಕರ ವಾಹನ ಜಾಥಾ ನಡೆಯಲಿದೆ. ವಾಹನ ರ್ಯಾಲಿಯನ್ನು ಟೈಲರ್ ಇಸ್ಮಾಯಿಲ್ ಸಾಹೇಬ್ ಅವರು ಉದ್ಘಾಟಿಸಲಿದ್ದಾರೆ. ಅವರು ಈಸ್ಟರ್ನ್ ಗ್ರೂಪ್ಸ್ನ ಮಾಲಕ ಕಲಂದರ್ ಧ್ವಜ ಹಸ್ತಾಂತರ ಮೂಲಕ ವಾಹನ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ರ್ಯಾಲಿಯು ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಂಡು ಅಲ್ಲಿ ಸಂಜೆ ಗಂಟೆ 7ಕ್ಕೆ ಮರ್ಹೂಂ ಕೆಂಪಿ ಮುಸ್ತಫಾ ಹಾಜಿ ವೇದಿಕೆಯಲ್ಲಿ ಮಿಲಾದ್ ಸಮಾವೇಶ ಮತ್ತು ಬುರ್ಧಾ ಮಜ್ಲೀಸ್ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಜುಮ್ಮಾ ಮಸೀದಿಯ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾಶೀರ್ವಚನ ನೀಡಲಿದ್ದಾರೆ. ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ.ಟಿ. ಅಬ್ದುಲ್ ರಝಾಕ್ ಹಾಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಎಂ. ಮಹ್ರೂಫ್ ಸುಲ್ತಾನಿ ಅಲ್ಪುರ್ಖಾನಿ, ಆತೂರು ಅವರು ಸಮಾವೇಶವನ್ನು ಉದ್ಘಾಟಿಸಲಿದ್ದು, ಬಹು ಆಶಿಕ್ ದಾರಿಮಿ ಅಲಂಪುಝ ಅವರು ಪ್ರಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಬಹು ಆರಿಫ್ ಸಅದಿ ಬಟ್ಕಳ ಮತ್ತು ತಂಡದಿಂದ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭ ಬುಹು| ಫಕ್ರೆ ಆಲಂ ಮುಂಬೈ ಅವರಿಂದ ನಾತೇ ಶರೀಫ್ ಹಾಡಲಿದ್ದಾರೆ. ಸಮಾರಂಭದಲ್ಲಿ ಹಲವಾರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದ ಅವರು ಕಾರ್ಯಕ್ರಮದ ಕೊನೆಯಲ್ಲಿ ಈದ್ ಮಿಲಾದ್ ಸಮಿತಿ ಬಪ್ಪಳಿಗೆ ವತಿಯಿಂದ ಅನ್ನದಾನ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಬಶೀರ್ ಪರ್ಲಡ್ಕ, ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ಕೋಶಾಧಿಕಾರಿ ನ್ಯಾಯವಾದಿ ಶಾಕಿರ್ ಹಾಜಿ, ಕಾರ್ಯದರ್ಶಿ ನೌಶದ್ ಬೊಳುವಾರು, ಈದ್ ಮಿಲಾದ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಫಾಝ್ ಬನ್ನೂರು, ಕೋಶಾಧಿಕಾರಿ ಅಝೀಝ್ ಬಪ್ಪಳಿಗೆ, ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಸಂಚಾಲಕ ಕಾಸಿಂ ಹಾಜಿ ಮಿತ್ತೂರು, ಸಂಘಟನಾ ಕಾರ್ಯದರ್ಶಿ ಹಸೈನಾರ್ ಬನಾರಿ, ಮುಸ್ಲಿಂ ಯುವಜನ ಪರಿಷತ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವು ಉಪಸ್ಥಿತರಿದ್ದರು.
ರ್ಯಾಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶವಿಲ್ಲ
ಮಿಲಾದ್ ಸಮಾವೇಶಕ್ಕೆ ನಡೆಯುವ ಬೃಹತ್ ವಾಹನ ರ್ಯಾಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶವಿರುವುದಿಲ್ಲ. ರ್ಯಾಲಿಯು ಕಬಕದಿಂದ ಹೊರಟು ಬೊಳುವಾರು ಪುತ್ತೂರು ಪೇಟೆಯ ಮುಖ್ಯರಸ್ತೆಯಾಗಿ ದರ್ಬೆ, ಬೈಪಾಸ್ ಮೂಲಕ ಪರ್ಲಡ್ಕದಿಂದ ಕಿಲ್ಲೆ ಮೈದಾನಕ್ಕೆ ಸೇರಲಿದೆ. ಸಮಾವೇಶದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ.
ಶಾಕಿರ್ ಹಾಜಿ , ಕೋಶಾಧಿಕಾರಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು