ವಿಟ್ಲ: ವಿಷಯ ಪರಿವೀಕ್ಷಕರು, ಮುಖ್ಯ ಶಿಕ್ಷಕರಾಗಿ ಪದೋನ್ನತಿ, ವಿಷಯದ ಅವಧಿ 4 ರಿಂದ5 ಕ್ಕೆ ಏರಿಕೆ, ಖಾಲಿ ಹುದ್ದೆ ಭರ್ತಿ ಇತ್ಯಾದಿ ಸೌಲಭ್ಯ ಹಿಂದಿ ಶಿಕ್ಷಕರಿಗೂ ಇನ್ನು ಮುಂದೆ ಸಿಗಲಿದೆ. ತಾಲೂಕಿನಲ್ಲಿ 50% ಹುದ್ದೆ ಖಾಲಿ ಇದ್ದರೂ SSLC ಫಲಿತಾಂಶದಲ್ಲಿ ಹಿಂದಿಯೇ ಅಗ್ರಗಣ್ಯ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ಇದರ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಮ್ಮದ್ ರಿಯಾಜ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ಇದರ ತಾಲೂಕು ಘಟಕ ಬಂಟ್ವಾಳದ ವತಿಯಿಂದ ನಡೆದ ಶೈಕ್ಷಣಿಕ ಕಾರ್ಯಗಾರ ಮತ್ತು ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಕಿರು ಸನ್ಮಾನ ಸ್ವೀಕರಿಸಿ, ಈ ವರ್ಷ 100 ಶೇಕಡ ಫಲಿತಾಂಶ ದಾಖಲಿಸುವಂತೆ ಮನವಿ ಮಾಡಿದರು.ಈ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ ಸುಜೀರು ಸರಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ ಪ್ರೇಮಾ,ಕಾಡುಮಠ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕರಾದ ಪ್ರೇಮದಾಸ್ ರವರನ್ನು ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಲೋಕೇಶ್, ಶಿವಕುಮಾರ್ ಹಿಚ್ಕಡ, ಅನಿಲ್ ವ ವಡಗೇರಿ ಮತ್ತು ಸುಹಾಸಿನಿ ವಾಮದಪದವು ರವರಿಗೆ ನೆನಪಿನ ಕಾಣಿಕೆ ನೀಡಲಾಯಿತು. PhD ಪದವಿ ಪಡೆದ ತಾಲೂಕು ಹಿಂದಿ ಸಂಘದ ಅಧ್ಯಕ್ಷೆ ಡಾ.ಪೌಲಿ ಎನ್.ವಿ.ರವರಿಗೆ ಸನ್ಮಾನ, ಜಿಲ್ಲಾ ಸಂಘದ ಅಧ್ಯಕ್ಷತೆ ವಹಿಸಿಕೊಂಡ ಗೀತಾ ಕೊಡಂಗೆ ರವರನ್ನು ಗೌರವಿಸಲಾಯಿತಿ. ಹಿಂದಿ ಯಲ್ಲಿ 100%ಫಲಿತಾಂಶ ದಾಖಲಿಸಿದ ಶಾಲೆಗಳ ಶಿಕ್ಷಕರಿಗೆ ಪ್ರಮಾಣ ಪತ್ರ ನೀಡಲಾಯಿತು.ಸಂಪನ್ಮೂಲ ವ್ಯಕ್ತಿ ಗುಜರಾತಿನ ಯೋಗೇಂದ್ರನಾಥ ಮಿಶ್ರರವರು ಆಗಮಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಘವೇಂದ್ರ ಬಲ್ಲಾಳ್, ಶಿಕ್ಷಣ ಸಂಯೋಜಕಿ ಸುಜಾತ, ರಾಜ್ಯ ಸಂಘದ ವಿಭಾಗೀಯ ಅಧ್ಯಕ್ಷ ರಾಯಿ ರಾಜಕುಮಾರ್, ಜಿಲ್ಲಾ ಸಂಘದ ಕಾರ್ಯದರ್ಶಿ ವೆಂಕಟೇಶ್, ಮಂಗಳೂರು ತಾಲೂಕು ಸಂಘದ ಅಧ್ಯಕ್ಷರಾದ ಮಹೇಶ್, ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷರಾದ ಲ್ಯಾನ್ಸಿ ಉಪಸ್ಥಿತರಿದ್ದರು.
ತಾಲೂಕು ಸಂಘದ ಗೌರವಾಧ್ಯಕ್ಷರಾದ ರಮಾನಂದ ನೂಜಿಪ್ಪಾಡಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ಶಿಕ್ಷಕಿ ದೀಪಿಕಾ ದಿಲೀಪ್ ಕುಮಾರ್ ರಜಪೂತ್ ವಂದಿಸಿ, ಶಂಕರ್ ವೆಂಕಪ್ಪ ಪಾವಸ್ಕರ್ ಕಾರ್ಯಕ್ರಮ ನಿರೂಪಿಸಿ, ಜಯರಾಮ ಕಾಂಚನ ಪ್ರಾರ್ಥಿಸಿದರು. ಇಮ್ತಿಯಾಜ್, ಪಂಚಾಕ್ಷರಿ,ನಿರ್ಮಲ ಮೊಂತೇರೋ,ಜಯಕುಮಾರಿ ಸಹಕರಿಸಿದರು.