ನೆಲ್ಯಾಡಿ: ತುಳುನಾಡ ತುಡರ್ ವಾಟ್ಸಪ್ ಗ್ರೂಪ್ನಿಂದ ಅಶಕ್ತ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, 2ನೇ ವರ್ಷದ ಧನಸಹಾಯದ ಕೂಪನ್ ಡ್ರಾ ನ.5ರಂದು ಬಜತ್ತೂರು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು ಶುಭ ಹಾರೈಸಿದರು. ಆಟೋಟ ಸ್ಪರ್ಧೆ, ಅಶಕ್ತ ಕುಟುಂಬಗಳಿಗೆ ಕಿಟ್ ವಿತರಣೆ ಹಾಗೂ ಪ್ರಜ್ಞ ವಿಕಲಚೇತನ ಆಶ್ರಮ ಪುತ್ತೂರು ಇವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮತ್ತು ಕೂಪನ್ ಡ್ರಾ ನಡೆಯಿತು. ಪುತ್ತೂರು ಶೌರ್ಯ ವಿಪತ್ತು ನಿರ್ವಹಣೆ ತಂಡದ ಕ್ಯಾಪ್ಟನ್ ಸುರೇಶ್ ಪುತ್ತೂರು, ಮುದ್ಯ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಸಾವಿತ್ರಿ ಶಿಬಾರ್ಲ, ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು, ಮುದ್ಯ ಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ನೀರಕಟ್ಟೆ, ಬಜತ್ತೂರು ಗ್ರಾ.ಪಂ.ಸದಸ್ಯರಾದ ಉಮೇಶ್ ಓಡ್ರಪಾಲು, ಮಾಧವ ಒಂರ್ಬೋಡಿ, ಬಜತ್ತೂರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಪ್ರತಿನಿಧಿ ಸದಾನಂದ ಶಿಬಾರ್ಲ, ತುಳುನಾಡ ತುಡರ್ ಗ್ರೂಪ್ನ ಅಧ್ಯಕ್ಷ ಮನೋಜ್ ಕುಮಾರ್, ಉಪಾಧ್ಯಕ್ಷೆ ಮಮತಾ, ಕಾರ್ಯದರ್ಶಿ ದಯಾನಂದ ಆರಾಲುತೋಟ, ಉಪಕಾರ್ಯದರ್ಶಿ ರಮೇಶ್ ಮಂಜಿಪಲ್ಲ ಉಪಸ್ಥಿತರಿದ್ದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಶ್ರದ್ದಾ, ಶ್ರೇಯ, ಮೇಘಶ್ರೀ, ತೇಜಶ್ರೀ, ಭವಿಷ್ಯ ಪ್ರಾರ್ಥಿಸಿದರು.