ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.26 ರಿಂದ 29ರವರೆಗೆ ನಡೆಯಲಿರುವ ಜಾತ್ರೋತ್ಸವ ಮತ್ತು ದ.30 ಹಾಗೂ 31ರಂದು ನಡೆಯಲಿರುವ ಮೂಡಪ್ಪ ಸೇವೆ, ದುರ್ಗಾಪೂಜೆ, ಲಕ್ಷ ಬಿಲ್ವಾರ್ಚನೆ, ವರದಶಂಕರ ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆ ನ.13ರಂದು ಶ್ರೀಕ್ಷೇತ್ರದಲ್ಲಿ ನಡೆಯಿತು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ರವರು ಜಾತ್ರೋತ್ಸವದ ರೂಪುರೇಷೆಗಳ ಬಗ್ಗೆ ಪ್ರಸ್ತಾಪಿಸಿದರು. ಕ್ಷೇತ್ರದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕರವರು ದಶಂಬರ್ ತಿಂಗಳ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದರು. ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ದೇವಳದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆ, ಅರ್ಚಕ ನಾರಾಯಣ ಭಟ್, ಆಡಳಿತ ಸಮಿತಿ ಸದಸ್ಯರಾದ ಅರುಣ್ ಪ್ರಕಾಶ್ ರೈ ಮದಕ, ಸೀತಾರಾಮ ಗೌಡ ಮಿತ್ತಡ್ಕ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ,ಡಾ.ಸತೀಶ್ ರಾವ್, ಶೇಷಪ್ಪ ರೈ ಮೂರ್ಕಾಜೆ, ಉದ್ಯಮಿ ಯತೀಶ್ ರೈ ದುರ್ಗಾಪ್ರಸಾದ್ ಜೆ., ಪ್ರಭಾಕರ ರೈ ಬಾಜುವಳ್ಳಿ, ಚಂದ್ರನ್ ತಲೆಪ್ಪಾಡಿ, ಉದಯಕುಮಾರ್, ಉಮೇಶ್ ಮಿತ್ತಡ್ಕ, ದೇವಳದ ಕ್ಲರ್ಕ್ ವಿನಯ ಕುಮಾರ್ ಉಪಸ್ಥಿತರಿದ್ದರು. ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು.