ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮದಲ್ಲಿ ಸಂಸದ ನಳಿನ್
ಪುತ್ತೂರು: 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಬಳಿಕ ದೇಶದಲ್ಲಿ ಪ್ರಗತಿಯ ಪರಿವರ್ತನೆಯ ಯುಗ ಆರಂಭವಾಗಿದ್ದು, ಎಲ್ಲಾ ಕ್ಷೇತ್ರದಲ್ಲೂ ದೇಶ ಅದ್ಭುತವಾದ ಪ್ರಗತಿಯನ್ನು ಕಂಡಿದೆ ಎಂದು ದ.ಕ.ಸಂಸದ, ರಾಜ್ಯ ಬಿಜೆಪಿಯ ನಿಕಟಪೂರ್ವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಡಿ.28ರಂದು ವೀರಮಂಗಲ ಶಾಲೆಯಲ್ಲಿ ಪಿಎಂಶ್ರೀ ಕಾರ್ಯಚಟುವಟಿಕೆಗಳ ಶಾಲಾರ್ಪಣಾ ಕಾರ್ಯಕ್ರಮನ್ನು ಅವರು ಉದ್ಘಾಟಿಸಿ ಮಾತನಾಡಿ, ವೀರಮಂಗಲ ಶಾಲೆಯು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಈ ಶಾಲೆಯನ್ನು ಪಿಎಂಶ್ರೀಗೆ ಆಯ್ಕೆ ಮಾಡಿದ ಪುತ್ತೂರಿನ ನಿಕಟಪೂರ್ವ ಶಾಸಕ ಸಂಜೀವ ಮಠಂದೂರುರವರ ಕಾರ್ಯಕ್ಷಮತೆ ಪ್ರಶಂಸನೀಯ ಎಂದರು. ಪಿಎಂಶ್ರೀಗೆ ಆಯ್ಕೆಯಾದ ವೀರಮಂಗಲ ಶಾಲೆಗೆ ಮುಂದಿನ 5 ವರ್ಷ ಕೇಂದ್ರ ಸರಕಾರದಿಂದ ಅನೇಕ ಸೌಲಭ್ಯಗಳು ದೊರೆಯಲಿದೆ ಎಂದು ಹೇಳಿದ ನಳಿನ್ ಕುಮಾರ್‌ರವರು, ಈ ಶಾಲೆಯ ಮುಖ್ಯಗುರು ತಾರಾನಾಥ ಸವಣೂರು ಅತ್ಯುತ್ತಮ ಕ್ರಿಯಾಶೀಲ ಚಟುವಟಿಕೆಯ ಶಿಕ್ಷಕರಾಗಿ ಸಮಾಜದಲ್ಲಿ ಉನ್ನತವಾದ ಗೌರವವನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೀರಮಂಗಲ ಶಾಲೆಯ ವಿವಿಧ ಚಟುವಟಿಕೆಗಳನ್ನು ನೋಡಿ ಸಂಸದ ನಳಿನ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವೀರಮಂಗಲ ಶಾಲೆಯ ಅಭಿವೃದ್ಧಿಗೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಗರಿಷ್ಟ ಮಟ್ಟದ ಅನುದಾನವನ್ನು ನೀಡಿದ್ದೇನೆ ಎಂಬ ಸಂತೃಪ್ತ ಭಾವನೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್, ಸದಸ್ಯರುಗಳಾದ ಸುಧಾಕರ್, ಪದ್ಮಾವತಿ, ವಸಂತಿ, ಪಿಎಂ ಪೋಷಣ್ ಸಹಾಯಕ ನಿರ್ದೆಶಕ ವಿಷ್ಣುಪ್ರಸಾದ್‌ರವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ,, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಆನಾಜೆರವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಜಿ.ಪಂ.ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಿತೇಶ್ ಕುಮಾರ್ ಶಾಂತಿವನ, ಪ್ರವೀಣ್ ಸೇರಾಜೆ ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿ, ಶಿಕ್ಷಕಿಯರಾದ ಶಿಲ್ಪರಾಣಿ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೋಭಾ ವಂದಿಸಿದರು.
ನಿತ್ಯ ಚಪಾತಿ ಬಳಗದ ಉತ್ವನ್ನ ಪ್ರದರ್ಶನ:
ನಿತ್ಯ ಚಪಾತಿ, ಇತರ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು. ವಿಜ್ಞಾನ ವಸ್ತು ಪ್ರದರ್ಶನ, ಮೆಟ್ರಿಕ್ ಮೇಳ, ಕನ್ನಡ ಸಾಹಿತ್ಯ ಸಂಭ್ರಮ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸೇವಾ ದಳದ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ರಝಾಕ್,ಸದಸ್ಯರುಗಳಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ, ಲಿಂಗಪ್ಪ ಗೌಡ, ಪದ್ಮಾವತಿ, ಸುರೇಶ್, ಹಮೀದ್, ಸಮೀರ್, ರಾಜೇಶ್ವರಿ, ಪುಷ್ಪಾ,ಶಾಂಭಲತ,ಚಿತ್ರಾ, ರತ್ನಾವತಿ, ಚಿತ್ರಾ, ಭವ್ಯ, ಉಮ್ಮರ್, ಶಿಕ್ಷಕರಾದ ಹರಿಣಾಕ್ಷಿ, ಹೇಮಾವತಿ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ನಳಿನಿ, ಚಂದ್ರಾವತಿ ಸಹಕರಿಸಿದರು.
ವೀರಮಂಗಲ ಶಾಲೆಗೆ ಕೊಠಡಿ ಒದಗಿಸುವೆ:
ವೀರಮಂಗಲ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಯ ಕೊರತೆ ಇರುವುದನ್ನು ಶಾಲಾ ಮುಖ್ಯಗುರು ತಾರಾನಾಥ ಸವಣೂರುರವರು ಸಂಸದ ನಳಿನ್ ಕುಮಾರ್ ಕಟೀಲ್‌ರವರ ಗಮನಕ್ಕೆ ತಂದರು. ಎನ್‌ಎಂಪಿಟಿ ಮತ್ತು ಎಂಆರ್‌ಪಿಎಲ್‌ಗಳ ಸಹಕಾರದಿಂದ ಕೊಠಡಿಯನ್ನು ಒದಗಿಸಿಕೊಡುವುದಾಗಿ ಸಂಸದ ಕಟೀಲ್ ಭರವಸೆ ನೀಡಿದರು.