ಕ್ರೀಡಾಪಟುವಿನ ಸಂಕಷ್ಟಕ್ಕೆ ನೆರವಾದ ಸರ್ವೆ ಸೌಹಾರ್ದ ವೇದಿಕೆ ಅನಾರೋಗ್ಯದಲ್ಲಿರುವ ರವಿ ಮುರುಳ್ಯರಿಗೆ ರೂ.10,000 ಧನ ಸಹಾಯ

0

ಪುತ್ತೂರು: ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿರುವ ಯುವ ಕ್ರೀಡಾಪಟು ರವಿ ಮುರುಳ್ಯ ಅವರಿಗೆ ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಕ್ರೀಡಾಭಿಮಾನಿಗಳ ಸಹಕಾರದಿಂದ ಸಂಗ್ರಹಿಸಲಾದ ರೂ.10,000 ಮೊತ್ತವನ್ನು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಹಸ್ತಾಂತರಿಸಿದರು. ರವಿ ಅವರು ಕ್ರಿಕೆಟ್ ಪಟು ಆಗಿದ್ದು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು ಕಿಡ್ನಿ ಸಂಬಂಧಿತ ಖಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.13 ಮತ್ತು ಜ.14ರಂದು ಕಲ್ಪಣೆಯಲ್ಲಿ ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಎಸ್‌ಪಿಎಲ್ ಸೀಸನ್-8 ಕ್ರಿಕೆಟ್ ಪಂದ್ಯಾಟ ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ ಕ್ರೀಡಾಪಟು ದಿನ ರವಿ ಮುರುಳ್ಯ ಅವರ ಸಂಕಷ್ಟ ತಿಳಿದ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ನೇತೃತ್ವದಲ್ಲಿ ಅಂದಿನ ದಿನ ಕ್ರೀಡಾಭಿಮಾನಿಗಳಿಂದ ಮೊತ್ತ ಸಂಗ್ರಹಿಸಲಾಗಿತ್ತು. ಹಾಗೆ ಸಂಗ್ರಹಿಸಿ 10,000 ರೂ. ಮೊತ್ತವನ್ನು ರವಿ ಅವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿದೆ. ರೋಗಿಗಳಿಗೆ ಸಹಾಯ ಮಾಡುವುದು ನಮ್ಮ ಬಾಧ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಯುವ ಕ್ರೀಡಾಪಟು ರವಿ ಮುರುಳ್ಯ ಅವರಿಗೆ ಸಣ್ಣ ಮಟ್ಟಿನಲ್ಲಿ ನೆರವು ನೀಡಿದ್ದೇವೆ. ಸರ್ವೆ ಸೌಹಾರ್ದ ವೇದಿಕೆ ಹಿಂದಿನಿಂದಲೂ ಕ್ರೀಡೆ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದು, ಮುಂದಕ್ಕೂ ಅದನ್ನು ಮುಂದುವರಿಸಲಿದೆ ಎಂದು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here