ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರಕಾರ ನವದೆಹಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 20 ರಿಂದ 22ರವರೆಗೆ ಕಲಬುರಗಿಯ ಸೇಡಂನಲ್ಲಿ ನಡೆದ 31ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿಗಳಾದ ಸುಹಾಸ್ ಎಂ ಬನಾಕರ್ ಹಾಗೂ ಹೃಷಿಕೇಶ್ ನಾಯಕ್ ಎನ್. ಇವರು ’ಫಾರ್ಮುಲೇಟಿಂಗ್ ನ್ಯಾಚುರಲ್ ಫುಡ್ ಕಲರ‍್ಯಾಂಟ್ ಫ್ರಮ್ ರೆಡ್ ಡ್ರ್ಯಾಗನ್ ಫ್ರುಟ್ ಪೀಲ್’ ಎಂಬ ವಿಜ್ಞಾನ ಯೋಜನೆಯನ್ನು ಮಂಡಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿ ನಿಶಿತಾ ಕೆ.ಕೆ. ಇವರು ತರಬೇತಿ ನೀಡಿರುತ್ತಾರೆ. ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here