ಪುತ್ತೂರು ನೆಹರುನಗರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಂಡ ನೂತನ ರೈಲ್ವೇ ಮೇಲ್ಸೆತುವೆ ಪರಿಶೀಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್

0

ಪುತ್ತೂರಿನ ಬಹು ದಿನಗಳ ಬೇಡಿಕೆ ಈಡೇರಿದೆ‌-ನಳಿನ್

ಪುತ್ತೂರು: ಪುತ್ತೂರಿನ ನೆಹರುನಗರ ರೈಲ್ವೇ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಸರಕಾರ ಬಹುದಿನಗಳ ಬೇಡಿಕೆಯನ್ನು ಪೂರೈಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಪುತ್ತೂರು ನೆಹರುನಗರದಲ್ಲಿ ನಿರ್ಮಾಣಗೊಂಡ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಮೇ.1 ರಂದು ಪರಿಶೀಲನೆ ಮಾಡಿ ಮಾಧ್ಯಮದ ಜೊತೆ ಮಾತನಾಡಿದರು. ಸರಕಾರ ಎಪಿಎಂಸಿ ಅಂಡರ್ ಪಾಸ್ ಅನ್ನು 50 -50 ಅನುದಾನದಲ್ಲಿ ಮಾಡಿತ್ತು. ನೆಹರುನಗರದ ರೈಲ್ವೇ ಮೇಲ್ಸೆತುವೆ ಕುರಿತು ವಿವೇಕಾನಂದ ಕಾಲೇಜು ಮತ್ತು ಆಗಿನ ನಮ್ಮ ಶಾಸಕ ಸಂಜೀವ ಮಠಂದೂರು, ಆಗಿನ ನಗರಸಭೆ ಅಧ್ಯಕ್ಷರ ಮನವಿಯಂತೆ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜೊತೆ ಮಾತಮಾಡಿದಾಗ ರೈಲ್ವೇ ಇಲಾಖೆಯೇ ಪೂರ್ಣ ಅನುದಾನ ಭರಿಸಿತು. ಹಾಗಾಗಿ ಕೇವಲ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇವತ್ತು ಕಾಮಗಾರಿಯ ಗುತ್ತಿಗೆದಾರರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ನಾವು ಪರಿಶೀಲನೆ ಮಾಡಿದ್ದು ಮಾತ್ರ.ಕಾನುನು ನೀತಿ ಸಂಹಿತೆ ಇರುವುದರಿಂದ ನಾವೇನು ಉದ್ಘಾಟನೆ ಮಾಡುವ ಹಾಗಿಲ್ಲ ಎಂದರು.


ಸಂಸದರನ್ನು ಸ್ಬಾಗತಿಸಿದ ವಿದ್ಯಾರ್ಥಿಗಳು:
ನಮ್ಮ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಸಂಸದರನ್ನು ಸ್ವಾಗತಿಸಿದರು. ಬಳಿಕ ಸಂಸದರ ಜೊತೆ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷರಾದ ವಿದ್ಯಾ ಗೌರಿ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಉದ್ಯಮಿ ಸೀತಾರಾಮ ರೈ , ನ್ಯಾಯವಾದಿ ಮುರಳಿಕೃಷ್ಣ ಚಲ್ಲಂಗಾರ್, ನ್ಯಾಯವಾದಿ ಶಿವಪ್ರಸಾದ್ ಇ, ರವಿನಾರಾಯಣ, ಅಚ್ಚುತ ನಾಯಕ್, ಮುರಳಿಕೃಷ್ಣ ಹಸಂತಡ್ಕ, ಅಜಿತ್ ಕುಮಾರ್ ರೈ, ಸಚಿನ್ ಶೆಣೈ, ವಿನಯ ಕಲ್ಲೇಗ, ಮನೀಶ್ ಕುಲಾಲ್, ಸಂತೋಷ್ ಬೋನಂತಾಯ, ರಂಜಿತ್ ಮಲ್ಲ, ಶಿವಪ್ರಸಾದ್ ಮಯ್ಯ, ಅಭಿಜಿತ್ ಕೊಡಿಪ್ಪಾಡಿ, ಅಮೃತ ಮಲ್ಲ, ರಾಜೇಶ್ ಬನ್ನೂರು, ಅಶೋಕ್ ಹಾರಡಿ, ಸಚಿನ್ ಶೆಣೈ, ಸವೀನ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here