ಪುಂಜಾಲಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ 2024-2025ನೇ ಸಾಲಿನ ಮಂತ್ರಿಮಂಡಲ ಚುನಾವಣೆ ಮೂಲಕ ಶಾಲಾ ನಾಯಕರನ್ನು ಆಯ್ಕೆ ಮಾಡಲಾಯಿತು.
ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಶಾಲಾ ನಾಯಕನಾಗಿ ಮುಹಮ್ಮದ್ ಆಸೀಂ,ಉಪ ನಾಯಕಿಯಾಗಿ ಫಾತಿಮತ್ ನೌಶೀಯ, ಜಲ ಮತ್ತು ಮಾಲಿನ್ಯ ಮಂತ್ರಿಯಾಗಿ ಹನ್ಹಾ ಆಯಿಷಾ, ಕ್ರೀಡಾ ಮಂತ್ರಿಯಾಗಿ ಮಶ್ಕೂರ ಹನಾ ಮತ್ತು ಅಯಾನ್ ಶೇಖ್, ಶಿಸ್ತು ಮಂತ್ರಿಯಾಗಿ ತೃಷಾ ಮತ್ತು ರಝಾ ಅಲಿಖಾನ್ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಪದಾಧಿಕಾರಿಗಳಿಗೆ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಪ್ರಮಾಣ ವಚನ ಬೋಧಿಸಿದರು. ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಆಶೀರ್ವದಿಸಿದರು . ಈ ಸಂದರ್ಭದಲ್ಲಿ ಶೇಖ್ ಅಸ್ಮಾ, ವಿಮಲ, ಪವಿತ್ರ, ಚಂದ್ರಾವತಿ, ಅನ್ನಪೂರ್ಣೇಶ್ವರಿ, ವನಿತಾ, ಖುರ್ಷೀದ್, ನೂರ್ ಜಹಾನ್, ಶೇಖ್ ಸಾದಿಯ, ಎಸ್.ಪಿ.ರಝೀಯ , ಸಾಜಿದ ತಬಸ್ಸುಂ, ಸಮೀನಾ ಮತ್ತಿತರರು ಹಾಜರಿದ್ದರು. ಶೇಖ್ ಜಲಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು.