ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

0

ಪುತ್ತೂರು:ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನೆಯು ಜೂ.14ರಂದು ಶಾಲಾ ಸಭಾಭವನದಲ್ಲಿ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊರವರು ವಿವಿಧ ಸಂಘಗನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಘಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಯಲು ಅವಕಾಶವಿದೆ ಹಾಗೂ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವಗಳನ್ನು, ಜೀವನದಲ್ಲಿ ಶಿಸ್ತನ್ನು ಪಾಲಿಸಲು ಸಂಘಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಇ.ಎಲ್.ಸಿ. ಸಂಘದ ಅಧ್ಯಕ್ಷೆ ಫಾತಿಮತ್ ಶಝಾ, ಪರಿಸರ ಸಂಘದ ಅಧ್ಯಕ್ಷೆ ಶಾಹಿಮಾ, ಕ್ರೀಡಾ ಹಾಗೂ ಯೋಗ ಸಂಘದ ಅಧ್ಯಕ್ಷೆ ಶೈಮ, ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಫಾತಿಮತ್ ಫಿಝಾ, ಮಕ್ಕಳ ಹಕ್ಕು ಮತ್ತು ಇಂಟರ‍್ಯಾಕ್ಟ್ ಸಂಘದ ಅಧ್ಯಕ್ಷೆ ಇಂಚರ, ಕ್ವಿಜ್ ಹಾಗೂ ಸ್ವಚ್ಛಗ್ರಹ ಸಂಘದ ಅಧ್ಯಕ್ಷೆ ಸಿಂಚನಾ, ವಿಜ್ಞಾನ ಹಾಗೂ ಗಣಿತ ಸಂಘದ ಅಧ್ಯಕ್ಷೆ ಆಂಚಲ್ ಎಸ್ ನಾಯ್ಕ್, ಅಂಚೆ ಚೀಟಿ ಹಾಗೂ ಗ್ರಾಹಕರ ಸಂಘದ ಅಧ್ಯಕ್ಷೆ ನಿಫ್ನಾ ಮತ್ತು ಗೈಡ್ಸ್ ಸಂಘದ ಅಧ್ಯಕ್ಷೆ ಪ್ರಣಮ್ಯರವರು ತಮ್ಮ ತಮ್ಮ ಸಂಘಗಳ ಮಹತ್ವಗಳ ಬಗ್ಗೆ ವಿವರಿಸಿದರು.
ವಿದ್ಯಾರ್ಥಿನಿಯರಾದ ಸ್ತುತಿ ವಂದಿಸಿದರು. ಫಾತಿಮತ್ ಫಿಝಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here