34 ನೆಕ್ಕಿಲಾಡಿ: ಕುಸಿದ ಬೃಹತ್ ಧರೆ – ಮನೆಗೆ ಭಾಗಶಃ ಹಾನಿ – ಮನೆ ಮಂದಿ ಪಾರು

0

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ನೆಕ್ಕಲ ಎಂಬಲ್ಲಿ ಆ.2ರಂದು ಬೆಳಗ್ಗೆ ಧರೆ ಕುಸಿದು ಬಿದ್ದು ಮನೆಯೊಂದು ಭಾಗಶಃ ಹಾನಿಗೊಂಡಿದೆ.

ಮನೆಯ ಸಮೀಪವೇ ಇದ್ದ ಇಲ್ಲಿನ ಹನೀಫ್ ಎಂಬವರ ಮನೆಯ ಪಕ್ಕದ ಧರೆ ಕುಸಿದಿದ್ದು ಮನೆಯ ಗೋಡೆ, ಗ್ರಾನೈಟ್‌ನ ನೆಲ ಸಂಪೂರ್ಣ ಬಿರುಕು ಬಿಟ್ಟಿದೆ. ಮನೆಯ ಒಂದು ಬದಿಯ ಗೋಡೆ ಕಾಲು ಭಾಗದಷ್ಟು ಮಣ್ಣಿನಿಂದ ಮುಚ್ಚಿ ಹೋಗಿದ್ದು, ಕಿಟಕಿಯ ಮೂಲಕ ಮಣ್ಣಿನ ರಾಶಿ ಮನೆಯೊಳಗೂ ನುಗ್ಗಿದೆ. ಬೆಳಗ್ಗೆ 10ರ ಸುಮಾರಿಗೆ ಘಟನೆ ನಡೆದಿದ್ದು, ಭಾರೀ ಶಬ್ದದೊಂದಿಗೆ ಧರೆ ಕುಸಿದಿದ್ದು, ಮನೆ ಮಂದಿ ಬೆಚ್ಚಿ ಬಿದ್ದು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯು ಭಾಗಶಃ ಹಾನಿಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿದೆ.
ಘಟನಾ ಸ್ಥಳಕ್ಕೆ 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಮತ್ತು ಇಸಾಕ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here