ಬೆಟ್ಟಂಪಾಡಿ:ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ದಿನಾಚರಣೆ ಆ.21ರಂದು ನಡೆಯಿತು.
ಮುಖ್ಯ ಅತಿಥಿ ಎಸ್.ಎ.ಟಿ ಪ್ರೌಢಶಾಲೆ ಮಂಜೇಶ್ವರ ಇಲ್ಲಿನ ನಿವೃತ್ತ ಮುಖ್ಯ ಗುರು ಉದಯಶಂಕರ ಭಟ್ ಭಾಗವಹಿಸಿ ಮಾತನಾಡಿ, ಸಂಸ್ಕೃತ ಭಾಷೆಯನ್ನು ವಿದ್ಯಾರ್ಥಿಗಳು ಆಸಕ್ತಿದಾಯಕವಾಗಿ ಕಲಿಯುವಂತೆ ಶಿಕ್ಷಕರಾದ ನಾವು ಅವರಿಗೆ ಪ್ರೇರಣೆ ನೀಡುತ್ತಾ ಬಂದರೆ ಈ ಭಾಷೆಯ ಉಳಿವು ಸಾಧ್ಯ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್ ಮುಖ್ಯ ಶಿಕ್ಷಕ ರಾಜೇಶ್ ಎನ್ ಉಪಸ್ಥಿತರಿದ್ದರು.
ಕಳೆದ ಹತ್ತನೇ ತರಗತಿ ಶೈಕ್ಷಣಿಕ ಸಾಲಿನಲ್ಲಿ ಸಂಸ್ಕೃತ ವಿಷಯದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷಾ ಶಿಕ್ಷಕ ಶಿವರಾಮ್ ಭಟ್ ಸ್ವಾಗತಿಸಿ. ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಶರಣ್ಯ ಎಸ್ ಹಾಗೂ ಪೂರ್ವಿಭರಣೇಕರ್ ಕಾರ್ಯಕ್ರಮ ನಿರೂಪಿಸಿದರು.