ಉಪ್ಪಿನಂಗಡಿ: ಗಮಕ ಸೌರಭ ಕಾರ್ಯಕ್ರಮ

0

ಉಪ್ಪಿನಂಗಡಿ: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ಶನಿವಾರದಂದು ಇಲ್ಲಿನ ಸಂಗಮ ಕೃಪಾ ಸಭಾಂಗಣದಲ್ಲಿ ಗಮಕ ಸೌರಭ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಸಾಹಿತ್ಯದ ವಿವಿಧ ಮಜಲುಗಳನ್ನು ಎಳೆ ಮನಸ್ಸುಗಳಿಗೆ ತಲುಪಿಸುವ ಕಾರ್ಯ ಸಾಹಿತ್ಯ ಪರಿಷತ್ ನಿಂದ ನಡೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕೆಂದರು.


ಉತ್ತರ ಕುಮಾರನ ಪೌರುಷ ಎಂಬ ಕಾವ್ಯ ವಿಚಾರದಲ್ಲಿ ಗಮಕ ವಾಚನವನ್ನು ಗಣಪತಿ ಪದ್ಯಾಣ ರವರು, ಗಮಕ ವ್ಯಾಖ್ಯಾನವನ್ನು ಮುಳಿಯ ಶಂಕರ್ ಭಟ್ ರವರು ನಡೆಸಿಕೊಟ್ಟರು.
ಸಭೆಯಲ್ಲಿ ಘಟಕದ ಗೌರವ ಕೋಶಾಧಿಕಾರಿ ಡಾ. ಗೋವಿಂದ ಪ್ರಸಾದ್ ಕಜೆ , ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಡಾ. ತಾಳ್ತಜೆ ವಸಂತಕುಮಾರ , ಪ್ರೊ. ನಂದೀಶ್ ವೈ. ಡಿ., ಪ್ರೊ. ಹುಚ್ಚೇಗೌಡ , ಉಪನ್ಯಾಸಕ ರಮೇಶ್, ರಾಜೇಂದ್ರ ಭಟ್, ವೀಣಾ ಕಜೆ, ರಮೇಶ್ ಕಜೆ, ಅಬ್ದುಲ್ ರಹಿಮಾನ್ ಯೂನಿಕ್, ಶಾಂತಾ ಕುಂಟಿನಿ, ಮೋಹನ್ ಭಟ್, ಸುನೀತಾ , ಶೀಲಾ ಭವನೇಶ್ವರಿ ರೈ ಮತ್ತಿತರರು ಉಪಸ್ಥಿತರಿದ್ದರು.


ಘಟಕದ ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್ ಸ್ವಾಗತಿಸಿದರು. ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಉದಯಕುಮಾರ್ ಯು.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಪ್ರಸಾದ್ ವಂದಿಸಿದರು. ಶ್ರೀ ರಾಮ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here