ಸುದಾನ ವಿದ್ಯಾಸಂಸ್ಥೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಾಲಿಬಾಲ್ ಪಂದ್ಯಾಟ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಸುದಾನ ವಸತಿಯುತ ಶಾಲೆ, ಪುತ್ತೂರು ಇವರ ಸಹಯೋಗದಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢ ಶಾಲಾ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾಟದ ಉದ್ಘಾಟನ ಸಮಾರಂಭವು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಆ.30ರಂದು ನಡೆಯಿತು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸಮಿತಿಯ ಅಧ್ಯಕ್ಷ ಪ್ರಮೋದ್ ಕುಮಾರ್ ದೀಪೋಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ದೈಹಿಕ ಕ್ಷಮತೆ ಮತ್ತು ಇಚ್ಛಾಶಕ್ತಿ ಜೀವನದಲ್ಲಿ ಎದುರಾಗುವ ಕಷ್ಟಕಾರ್ಪಣ್ಯಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಮೂಲಕ ಸುದೃಡ ಸಮಾಜ ನಮ್ಮದಾಗಲು ಸಾಧ್ಯ ಎಂದು ಕ್ರೀಡಾಪಟುಗಳಿಗೆ ಸಂದೇಶ ನೀಡಿದರು.

ಪುತ್ತೂರು ಕಂಬಳ ಸಮಿತಿಯ ಉಪಾಧ್ಯಕ್ಷರು, ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರಾದ ನಿರಂಜನ್ ರೈ ಮಠಂತಬೆಟ್ಟು ಕಂಬಳ ಕ್ರೀಡೆಯ ಕಾಮೆಂಟ್ರಿಯ ಝಲಕ (ತುಣಕನ್ನು) ಪ್ರಸ್ತಾಪಿಸಿ ಕ್ರೀಡಾ ಪಟುಗಳಿಗೆ ಸಂಚಲನ ಶಕ್ತಿಯನ್ನು ತುಂಬಿ ಪ್ರೋತ್ಸಾಹಿಸಿದರು. ಸವಣೂರು ಪದವಿ ಪೂರ್ವ ಕಾಲೇಜಿನ ದೈ.ಶಿ. ಶಿಕ್ಷಕ ಮಾಮಚ್ಚನ್ ಪ್ರಾಸ್ತವಿಕ ಮಾತುಗಳನ್ನಾಡಿದರು.

ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. ವಲಯದ ನೋಡಲ್ ಅಧಿಕಾರಿ ನರೇಶ್ ಲೋಬೊ, ಕುಸುಮವತಿ, ಶಾಲಾ ದೈ.ಶಿ ಶಿಕ್ಷಕಿ ಲೀಲಾವತಿ ಉಪಸ್ಥಿತರಿದ್ದರು.


ಬಾಲಕರ ವಿಭಾಗದಲ್ಲಿ ಮೌಂಟನ್ ವ್ಯೂ ಸಾಲ್ಮರ ಪ್ರಥಮ ಸ್ಥಾನಿಯಾಗಿ ಬೆಥನಿ ಆಂಗ್ಲ ಮಾಧ್ಯಮ ಪಾಂಗ್ಲಾಯಿ ದ್ವಿತೀಯ ಸ್ಥಾನವನ್ನು ಬಾಲಕಿಯರ ವಿಭಾಗದಲ್ಲಿ ಶಿವರಾಮ ಕಾರಂತ ಪ್ರೌ. ಶಾಲೆ ಪ್ರಥಮ, ಸೈಂಟ್ ವಿಕ್ಟರ‍್ಸ್ ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಫಲಕವನ್ನು ಮುಡಿಗೇರಿಸಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿರುತ್ತಾರೆ. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ಸುಶಾಂತ್ ಹಾರ್ವಿನ್ ರವರು ಪ್ರಶಸ್ತಿ ವಿತರಣೆ ಮಾಡಿದರು. ಶಾಲಾ ಶಕ್ತಿ ಸ್ಪೋಟ್ಸ್ ಕ್ಲಬ್ ನ ಸಂಯೋಜಕ ನವೀನ್ ವಂದಿಸಿದರು. ಪುಷ್ಪರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here